41 ವರ್ಷದ ನಟಿ ಕತ್ರೀನಾ​​ಗೆ ಸಕ್ಕರೆ ಕಾಯಿಲೆ! Katrina Kaif  ಕೈ ಮೇಲಿರುವ ಕಪ್ಪು ಪ್ಯಾಚ್​​ ಏನು ಗೊತ್ತಾ?

katrinakaif
Published on

ಮುಂಬೈ: ಮಧುಮೇಹಕ್ಕೆ ತುತ್ತಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಧುಮೇಹವನ್ನು ನಿಯಂತ್ರಿಸಲು ಮಾರುಕಟ್ಟೆಯಲ್ಲಿ ವಿವಿಧ ಸಾಧನಗಳು ಲಭ್ಯವಿವೆ. ಅವುಗಳಲ್ಲಿ ಒಂದು ಗ್ಲುಕೋಸ್ ಮಾನಿಟರ್ ಪ್ಯಾಚ್ ಆಗಿದೆ. ಇತ್ತೀಚೆಗೆ, ಕತ್ರಿನಾ ಕೈಫ್ (Katrina Kaif  ) ಗ್ಲೂಕೋಸ್ ಮಾನಿಟರ್ ಪ್ಯಾಚ್ (Black Patch ) ಧರಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಕತ್ರೀನಾಗೆ ಡಯಾಬಿಟೀಸ್ ಇದೆಯಾ? ಎಂಬ ಆತಂಕವೂ ಅಭಿಮಾನಿಗಳಲ್ಲಿ ಮೂಡಿದೆ. ಕತ್ರಿನಾ (Katrina Kaif ) ತೋಳಿನ ಮೇಲಿನ ಈ ತೇಪೆ ಯಾವುದು ಮತ್ತು ಯಾವಾಗ ಬಳಸುತ್ತಾರೆ..? ಇದನ್ನು ಧರಿಸುವುದರಿಂದ ಏನಾದರೂ ಪ್ರಯೋಜನವಿದೆಯೇ? ಎಂದು ನೆಟಿಜನ್‌ಗಳು ಸೋಶಿಯಲ್​​ ಮೀಡಿಯಾದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಸೀರೆಯಲ್ಲಿ ಕಂಗೊಳಿಸುತ್ತಿದ್ದ ಕತ್ರೀನಾ ಕೈಫ್ ಅವರು ಬಲತೋಳಿನ ಹಿಂಭಾಗದಲ್ಲಿ ಕಪ್ಪು ಬಣ್ಣದ ಒಂದು ಪ್ಯಾಚ್ ಹಾಕಿಕೊಂಡಿದ್ದರು. ಇದು ಡಯಾಬಿಟಿಕ್ ಪ್ಯಾಚ್ ಎಂದು ಹೇಳಲಾಗುತ್ತಿದೆ. ಡಯಾಬಿಟಿಕ್ ಪ್ಯಾಚ್ ಎಂದರೆ, ಸ್ಮಾರ್ಟ್ ಇನ್ಸುಲಿನ್ ಹ್ಯಾಚ್. ಗ್ಲಕೋಸ್-ಪ್ರತಿಕ್ರಿಯಾತ್ಮಕ ಇನ್ಸುಲಿನ್ ಪ್ಯಾಚ್ ಎಂದೂ ಕರೆಯಲಾಗುತ್ತದೆ. ಮೈಮೇಲೆ ಧರಿಸುವ ಒಂದು ವೈದ್ಯಕೀಯ ಉಪಕರಣ. ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನ ನಿಯಂತ್ರಣ ಮಾಡುವ ಸಲುವಾಗಿ ಇದರಲ್ಲಿ ಇನ್ಸುಲಿನ್ ತುಂಬಿಡಲಾಗುತ್ತದೆ. ಇದು ಮಧುಮೇಹಿಗಳ ಆಹಾರ ಕ್ರಮಕ್ಕೂ ಸಹಾಯ ಮಾಡುತ್ತದೆ. ಇಂಥ ಡಯಾಬಿಟಿಕ್ ನಿಯಂತ್ರಣ ಪ್ಯಾಚ್ ಕತ್ರೀನಾರ ಮೈಮೇಲೆ ಕಾಣಿಸಿದ್ದು, ಅಭಿಮಾನಿಗಳಲ್ಲಿ ಸಹಜವಾಗಿಯೇ ಆತಂಕ ಮೂಡಿಸಿದೆ. ಸಾಮಾನ್ಯವಾಗಿ ಡಯಾಬಿಟಿಕ್ ಪ್ಯಾಚ್‌ನ್ನು ಟೈಪ್ 1 ಡಯಾಬಿಟಿಸ್‌ನಿಂದ ಬಳಲುತ್ತಿರುವವರು ಮತ್ತು ಗಂಭೀರ ಸ್ವರೂಪದ ಟೈಪ್ 2 ಡಯಾಬಿಟಿಸ್ ಹೊಂದಿರುವವರು ವೈದ್ಯರ ಸಲಹೆಯ ಮೇರೆಗೆ ಧರಿಸಿರುತ್ತಾರೆ. ಇಂಥವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ನಿರಂತವಾಗಿ ಚೆಕ್ ಮಾಡುವ ದೃಷ್ಟಿಯಿಂದ ಈ ಡಿವೈಸ್ ಅಳವಡಿಸಿಕೊಳ್ಳಲು ವೈದ್ಯರು ಸೂಚಿಸುತ್ತಾರೆ. ಇನ್ನು ಕತ್ರೀನಾ ಕೈಫ್ ಕೈಮೇಲೆ ಇರುವುದು ಡಯಾಬಿಟಿಕ್ ಪ್ಯಾಚ್ ಎಂದು ಹೇಳಲಾಗಿದ್ದರೂ, ಅದೇನೂ ಅಧಿಕೃತವಾಗಿ ದೃಢವಾಗಿಲ್ಲ..

ಕತ್ರೀನಾ ಕೈಫ್ (Katrina Kaif  ) ತೋಳಿನ ಮೇಲಿನ ಕಪ್ಪು ಪ್ಯಾಚ್ ಯಾವುದು?

ಕತ್ರೀನಾ ಕೈಫ್ (Katrina Kaif  ) ತನ್ನ ತೋಳಿನ ಮೇಲೆ ಇರುವ  ಕಪ್ಪು ಬಣ್ಣದ ಪ್ಯಾಚ್​​, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮಾನಿಟರ್ ಮಾಡುವ ಪ್ಯಾಚ್ ಆಗಿದೆ. ಈ ಪ್ಯಾಚ್ ಅನ್ನು ಧರಿಸುವುದರ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮೇಲ್ವಿಚಾರಣೆ ಮಾಡಬಹುದು. ಕೇವಲ ಆಹಾರ ತಿನ್ನೋದನ್ನು ಕಂಟ್ರೋಲ್​​ ಮಾಡುವುದು ಮತ್ತು ಇನ್ಸುಲಿನ್  ತೆಗೆದುಕೊಳ್ಳುವುದರಿಂದ ಸಕ್ಕರೆಯನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. ಅದಕ್ಕಾಗಿಯೇ ಈ ಪ್ಯಾಚ್ ಅನ್ನು ಧರಿಸಲಾಗುತ್ತದೆ. ಈ ಪ್ಯಾಚ್ ಅನ್ನು ಸಿಜಿಎಂ ( CGM ) ಎಂದು ಕರೆಯಲಾಗುತ್ತದೆ.

CGM ಎನ್ನುವುದು ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ನಿಮಿಷಗಳಲ್ಲಿ ಪತ್ತೆಹಚ್ಚುವ ಯಂತ್ರವಾಗಿದೆ. ಅಂದರೆ ಈ ಯಂತ್ರವನ್ನು ಧರಿಸುವವರು ಮಧುಮೇಹದಿಂದ ಬಳಲುತ್ತಿರುವವರು ಮಾತ್ರವಲ್ಲದೇ ಫಿಟ್ನೆಸ್ ಫ್ರೀಕ್ಸ್, ಹಾರ್ಟ್​​ ರೇಟ್​ಗಳನ್ನು ಟ್ರ್ಯಾಕ್​​ ಮಾಡಲು ಸಹ ಈ ಯಂತ್ರವನ್ನು ಬಳಸಿ ಆರೋಗ್ಯವಾಗಿರಬಹುದು. ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆಯನ್ನು ಪರೀಕ್ಷಿಸಬೇಕಾದ ಜನರು ಈ ಯಂತ್ರವನ್ನು ಧರಿಸುತ್ತಾರೆ.ಈ ಪ್ಯಾಚ್ ಸಹಾಯದಿಂದ, ಸಕ್ಕರೆ ಮಟ್ಟವನ್ನು ದಿನವಿಡೀ ಟ್ರ್ಯಾಕ್ ಮಾಡಲಾಗುತ್ತದೆ. ಈ ಪ್ಯಾಚ್ ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಇತರ ಸಾಧನಕ್ಕೆ ಸಂಪರ್ಕಿಸುತ್ತದೆ. ಇದು ನಿಮಗೆ ರಕ್ತದ ಸಕ್ಕರೆಯ ಸೂಚನೆಗಳನ್ನು ನೀಡುತ್ತಲೇ ಇರುತ್ತದೆ. CGM ಪ್ಯಾಚ್  ಇತರ ಪ್ರಮುಖ ವಿಷಯಗಳು

  • ಪ್ರತಿ 7 ರಿಂದ 14 ದಿನಗಳಿಗೊಮ್ಮೆ ಈ ಪ್ಯಾಚ್ ಅನ್ನು ಬದಲಾಯಿಸಲಾಗುತ್ತದೆ.
  • CGM ಪ್ಯಾಚ್ ಅನ್ನು ಕೈಯ ಹಿಂಭಾಗದಲ್ಲಿ ಅಥವಾ ಹೊಟ್ಟೆಯ ಮೇಲೆ ಧರಿಸಲಾಗುತ್ತದೆ.
  • ಈ ಪ್ಯಾಚ್ ವೈರ್‌ಲೆಸ್ ಆಗಿದೆ.
  • ಈ ಪ್ಯಾಚ್ ಅನ್ನು ಬಳಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net