ಕಾಟೇರ ಸಿನಿಮಾ ವೀಕ್ಷಿಸಿದ ದರ್ಶನ್​​​ ಪತ್ನಿ ಭಾವುಕ, ದರ್ಶನ್​​ ಶ್ರಮ ಕಂಡು ಗೌರವ ಹೆಚ್ಚಾಯ್ತು ಎಂದ ವಿಜಯಲಕ್ಷ್ಮೀ ದರ್ಶನ್​​..!

katera mix
Published on

ಚಾಲೆಂಜಿಂಗ್​ ಸ್ಟಾರ್​​​ ದರ್ಶನ್​​ ಸಿನಿಮಾ ಕಾಟೇರ ರಾಜ್ಯದಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇನ್ನು ದರ್ಶನ್​​ ಫ್ಯಾನ್ಸ್​​ಗಳಂತೂ ಕಾಟೇರ ಚಿತ್ರದ ರಿಲೀಸ್​ಗಾಗಿ ಕಾದು ಕುಳಿತಿದ್ದರು. ಮೊದಲ ಶೋನಿಂದಲೇ ದಚ್ಚು ಸಿನಿಮಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ಯಾನ್‌ ಇಂಡಿಯಾ ಸಿನಿಮಾಗಳ ನಡುವೆ ದರ್ಶನ್​​​ ನಟಿಸಿರುವ ಕಾಟೇರ ಚಿತ್ರದ ಅಬ್ಬರ ಜೋರಾಗಿಯೇ ಇದೆ.

ಇದೀಗ ಕಾಟೇರ ಚಿತ್ರ ವೀಕ್ಷಿಸಿದ ದರ್ಶನ್​ ಪತ್ನಿ ವಿಜಯಲಕ್ಷ್ಮೀ ದರ್ಶನ್​​​ ಸಹ ಕಾಟೇರ ಚಿತ್ರದ ಕುರಿತಂತೆ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ʼಕಾಟೇರʼಚಿತ್ರದ ಕುರಿತಂತೆ ಪಾಸಿಟಿವ್​​ ರಿಯಾಕ್ಷನ್​​ ನೀಡಿದ್ದಾರೆ.

ನಾನು ಈಗಷ್ಟೇ ಕಾಟೇರ ಸಿನಿಮಾವನ್ನ ವೀಕ್ಷಿಸಿದೆ. ನಿಮಾ ಅದ್ಭುತವಾಗಿದೆ. ಅನೇಕ ದೃಶ್ಯಗಳನ್ನು ನೋಡಿ ನಾನು ಕಣ್ಣೀರು ಹಾಕಿದ್ದೇನೆ, ಸಿನಿಮಾ ನೋಡಿ ನಾನು ಹೊರನಡೆಯುತ್ತಿದ್ದಂತೆ ದರ್ಶನ್ ಅವರ ಶ್ರಮದ ಬಗ್ಗೆ ಹೆಮ್ಮೆ ಮತ್ತು ಗೌರವ ಹೆಚ್ಚಾಯಿತು. ತರುಣ್, "ಕಾಟೇರ" ನಿಮ್ಮ ಅತ್ಯುತ್ತಮ ಚಿತ್ರ ಎಂದು ದರ್ಶನ್​ ಪತ್ನಿ ಕಾಟೇರ ಸಿನಿಮಾವನ್ನ ಹಾಡಿ ಹೊಗಳಿದ್ದಾರೆ.

ಕಾಟೇರ ನನ್ನ ಅಚ್ಚುಮೆಚ್ಚಿನ ಸಿನಿಮಾ, ಇಂತಹ ಸಿನಿಮಾವನ್ನು ದರ್ಶನ್ ಫ್ಯಾನ್ಸ್‌ಗೆ ತೋರಿಸಲು ಕಾತರದಿಂದ ಕಾಯುತ್ತಿದ್ದೇನೆ. ನಿಜಕ್ಕೂ ಈ ಸಿನಿಮಾ ಮಾಸ್ಟರ್‌ಪೀಸ್ ಎಂದು ವಿಜಯಲಕ್ಷ್ಮಿ ಅವರು ಇಡೀ ತಂಡಕ್ಕೆ ಶುಭಹಾರೈಸಿದ್ದಾರೆ. ಆರಾಧನಾ ರಾಮ್, ದರ್ಶನ್ ಸಹೋದರಿ ಮಗ ಚಂದ್ರ ಕುಮಾರ್, ಕುಟುಂಬದ ಆಪ್ತ ಸೂರಜ್‌ಗೆ ಶುಭ ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net