ಕ್ಯೂಆರ್​ ಕೋಡ್​ ಬಳಸಿ ಕಾಶಿ ವಿಶ್ವನಾಥ ದೇಗುಲ ಪ್ರವೇಶ

kashi
Published on

ವಾರಣಾಸಿ: ಹಿಂದೂಗಳ ಪವಿತ್ರ ಧಾ್ಮಿಕ ಯಾತ್ರಾಸ್ಥಳ ಕಾಶಿ ವಿಶ್ವನಾಥ ದೇಗುಲಕ್ಕೆ ಭಕ್ತರು ಸುಲಭವಾಗಿ ಪ್ರವೇಶಿಸಲು ಅನುಕೂಲವಾಗುವಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ದೇವಾಲಯದ ಆವರಣದ ಪ್ರವೇಶಕ್ಕೆ ಕ್ಯೂಆರ್ ಕೋಡ್ ಆಧಾರಿತ ಗುರುತಿನ ಚೀಟಿಯನ್ನು ಒದಗಿಸಲಾಗುತ್ತದೆ. ವಿಐಪಿ ದರ್ಶನ ಮತ್ತು ಸರದಿ ಸಾಲಿನಲ್ಲಿ ದರ್ಶನಕ್ಕೆ ಬರುವವರಿಗೆ ಮಾತ್ರ ಈ ರೀತಿ ಪ್ರವೇಶ ನೀಡಲಾಗುವುದು.

ಕಳೆದ ಮಾರ್ಚ್‌ನಿಂದ ಈ ಸೌಲಭ್ಯವನ್ನು ಅಧಿಕಾರಿಗಳು ಮತ್ತು ನೌಕರರಿಗೆ ಮಾತ್ರ ನೀಡಲಾಗುತ್ತಿದ್ದು, ಇದೀಗ ಸಾಮಾನ್ಯ ಯಾತ್ರಾರ್ಥಿಗಳಿಗೂ ಈ ಸೌಲಭ್ಯ ಕಲ್ಪಿಸಲಾಗಿದೆ.

ದೇವಾಲಯದ್ಲಿ ಸೌಲಭ್ಯಗಳನ್ನು ಸುಧಾರಿಸುವ ಸಲುವಾಗಿ ಅಧಿಕಾರಿಗಳು ಡಿಜಿಟಲ್ ಸೇವೆಗಳನ್ನು ಎಲ್ಲೆಡೆ ಅಳವಡಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಕ್ಯೂಆರ್​ ಕೋಡ್ ಆಧಾರಿತ ಆರ್​ಎಫ್​ಐಡಿ (ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್) ಮೂಲಕ ಯಾತ್ರಾರ್ಥಿಗಳ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ದೇವಸ್ಥಾನದಲ್ಲಿ ಆರ್ ಎಫ್ ಐಡಿ ಯಂತ್ರ ಅಳವಡಿಸಲಾಗಿದೆ.

ಕಾಶಿ ವಿಶ್ವನಾಥ ದೇವರ ಲಾಂಛನ ಹೊಂದಿರುವ ಈ ಗುರುತಿನ ಚೀಟಿಯನ್ನು ದೇವಾಲಯದ ಆಡಳಿತ ಮಂಡಳಿಯಿಂದ ನೀಡಲಾಗುತ್ತದೆ. ಐಡಿ ಕಾರ್ಡ್‌ನಲ್ಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಗೇಟ್‌ಗಳು ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತವೆ. ಒಮ್ಮೆ ಈ ಪ್ರಕ್ರಿಯೆ ಆರಂಭವಾದರೆ ಸಂದರ್ಶಕರ ದಾಖಲೆಗಳನ್ನು ನಿರ್ವಹಣೆ ಮಾಡಲು ದೇವಸ್ಥಾನದ ಅಧಿಕಾರಿಗಳಿಗೆ ಸುಲಭವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net