ಕಸಕಲಪುರ ಮಾರಮ್ಮನ ಜಾತ್ರೆ

08-JULY-GPT-3
ಗುಂಡ್ಲುಪೇಟೆ ತಾಲೂಕಿನ ದೇಶೀಪುರ ಗ್ರಾಮದಲ್ಲಿ ಕಸಕಲಪುರ ಮಾರಮ್ಮನವರ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.
Published on

ಗುಂಡ್ಲುಪೇಟೆ: ತಾಲೂಕಿನ ದೇಶೀಪುರ ಗ್ರಾಮದಲ್ಲಿ ಮಂಗಳವಾರ ಕಸಕಲಪುರ ಮಾರಮ್ಮನವರ ಜಾತ್ರೆ ವಿಜೃಂಭಣೆಯಿಂದ ನೆರವೇರಿತು.

ಈ ಅಂಗವಾಗಿ ಗ್ರಾಮದ ದೇವಾಲಯಗಳು ಮತ್ತು ಪ್ರಮುಖ ಬೀದಿಗಳಲ್ಲಿ ತಳಿರು ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಬಸವೇಶ್ವರ ದೇವಾಲಯದಿಂದ ಕಸಕಲಪುರ ಮಾರಮ್ಮನವರ ಉತ್ಸವ ಮೂರ್ತಿಯನ್ನು ಹೂವುಗಳಿಂದ ಅಲಂಕರಿಸಿದ ಬಿಜ್ಜಿನ ಮೇಲಿರಿಸಿ ಮಂಗಳವಾದ್ಯಗಳು, ಸತ್ತಿಗೆ ಸುರಾಪಾನಿ ಹಾಗೂ ಜನಪದ ಕಲಾತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಪ್ರತಿಯೊಬ್ಬರೂ ಮೆರವಣಿಗೆಗೆ ಪೂಜೆ ಸಲ್ಲಿಸುವ ಮೂಲಕ ಭಕ್ತಿಭಾವ ಮೆರೆದರು.

ಪ್ರತಿ ಮನೆಗಳವರೂ ತಮ್ಮ ನೆಂಟರು ಬಂಧು-ಬಾಂಧವರನ್ನು ಕರೆದು ಸಡಗರ ಸಂಭ್ರಮಗಳಿಂದ ಆಚರಿಸಿದರು. ಭಕ್ತರು ಬಾಯಿಬೀಗ, ಕೊಂಡ ಹಾಯುವ ಮೂಲಕ ತಮ್ಮ ಹರಕೆಗಳನ್ನು ತೀರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net