

ಬೆಂಗಳೂರು: ಕೆಎಎಸ್ ಮರು ಪರೀಕ್ಷೆ ನಡೆಸುವಂತೆ ಆಗ್ರಹಿಸಿ ಭಾನುವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಕೆಎಎಸ್ ಸೇರಿ ವಿವಿಧ ಹುದ್ದೆ ಆಕಾಂಕ್ಷಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಕ್ತದಲ್ಲಿ ಬರೆಯುವ ಮೂಲಕ ‘ಪತ್ರ ಚಳವಳಿ’ ಹೋರಾಟ ಆರಂಭಿಸಿದ್ದಾರೆ.
‘ಕನ್ನಡದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿ, ಇಲ್ಲವೇ ನಮ್ಮ ರಕ್ತ ತಗೋಳಿ’ ಎಂಬ ೋಷವಾಕ್ಯ ಬರೆಯುವ ಮೂಲಕ ಗಾಂಧಿನಗರದಲ್ಲಿರುವ ಕರವೇ ಕಚೇರಿಯಲ್ಲಿ ಭಾನುವಾರ ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಚಾಲನೆ ನೀಡಿದರು.
ಬಳಿಕ ಬೆಂಗಳೂರಿನಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಮಂದಿ ಹಾಗೂ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚಿನ ಜನರು ತಮ್ಮ ರಕ್ತದಲ್ಲಿ ಬರೆದು ಹೋರಾಟಕ್ಕೆ ನಾಂದಿ ಹಾಡಿದ್ದಾರೆ. ರಕ್ತದಲ್ಲಿ ಪತ್ರ ಬರೆಯುವ ಹೋರಾಟವು ಮುಂದುವರಿಯಲಿದ್ದು, ಒಂದು ಲಕ್ಷ ಮಂದಿ ಪತ್ರ ಬರೆಯುವ ಗುರಿ ಹೊಂದಲಾಗಿದೆ.
‘ಕರ್ನಾಟಕದಲ್ಲಿ ಕನ್ನಡದ ರಾಮಯ್ಯ ಎಂದು ಹೆಸರುವಾಸಿಯಾದ ಸಿದ್ದರಾಮಯ್ಯನವರೇ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿ’ ಎಂಬ ೋಷವಾಕ್ಯಗಳನ್ನು ಬರೆಯುವ ಮೂಲಕ ಮರು ಪರೀಕ್ಷೆಗೆ ಆಗ್ರಹಿಸಿದ್ದಾರೆ.
ಬಜೆಟ್ ದಿನ ವಿಧಾನಸೌಧ ಮುತ್ತಿಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯು 16ನೇ ಬಜೆಟ್ ಮಂಡಿಸುತ್ತಿರುವ ಮಾ.7ರಂದು ವಿಧಾನಸೌಧ ಮುತ್ತಿಗೆ ಹಾಕಲು ಕರವೇ ಮತ್ತು ಕೆಎಎಸ್ ಹುದ್ದೆ ಆಕಾಂಕ್ಷಿಗಳು ನಿರ್ಧರಿಸಿದ್ದಾರೆ.
ಅಂದು ಸಾವಿರಾರು ಸಂಖ್ಯೆಯಲ್ಲಿ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದು, ಮುಖ್ಯಮಂತ್ರಿಗಳು ಅಷ್ಟರೊಳಗೆ ಮರು ಪರೀಕ್ಷೆ ೋಷಿಸಬೇಕು ಎಂದು ಆಗ್ರಹಿಸಿದ್ದಾರೆ.