ಶ್ರದ್ಧಾ ಭಕ್ತಿಯಿಂದ ಜರುಗಿದ ಸತ್ಯಶಿವಾನಂದರ ಪುಣ್ಯಾರಾಧನೆ ಕಾರ್ಯಕ್ರಮ

28-RNR-07
Published on

ರಾಣೆಬೆನ್ನೂರ: ತಾಲೂಕಿನ ಕರೂರ ಗ್ರಾಮದ ಸತ್ಯಶಿವಾನಂದ ಸ್ವಾಮೀಜಿಯವರ 37ನೇ ಪುಣ್ಯಾರಾಧನೆ ಹಾಗೂ ಶ್ರೀ ಸಿದ್ಧಾರೂಢ ಆಶ್ರಮದ ಪ್ರಥಮ ವಾರ್ಷಿಕೋತ್ಸವ ನಿಮಿತ್ತ ಸತ್ಯ ಶಿವಾನಂದ ಸ್ವಾಮಿ ಸೇವಾ ಸಮಿತಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಿಷ್ಣಪ್ಪ ಬಂಗಾರಿ ಸ್ನೇಹ ಕಲಾತಂಡದಿಂದ ಇತ್ತೀಚೆಗೆ ಸುಗಮ ಸಂಗೀತ, ಪ್ರಾರ್ಥನೆ ಸಂಗೀತ ಕಾರ್ಯಕ್ರಮ ಜರುಗಿತು.
ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಲಿಂಗದಹಳ್ಳಿ ರಂಭಾಪುರಿ ಶಾಖಾಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಖಂಡೇರಾಯನಹಳ್ಳಿ ಸಿದ್ದಾಶ್ರಮದ ನಾಗರಾಜಾನಂದ ಸ್ವಾಮೀಜಿ, ಹುಬ್ಬಳ್ಳಿಯ ಸಿದ್ಧಾರೂಢ ಮಠದ ಸಚಿದಾನಂದ ಸ್ವಾಮೀಜಿ, ಐರಣಿ ಮನಿಮಠದ ಗಜದಂಡ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕೃಷ್ಣಮೂರ್ತಿ ಬಂಗಾರಿ, ಸುಲ್ತಾನಸಾಬ ಪಿಂಜಾರ, ಗದಿಗಯ್ಯ ಶಾಸ್ತ್ರೀ, ನಾಗರಾಜ ಓಲೇಕಾರ ಸಂಗೀತ ಪ್ರಸ್ತುತ ಪಡಿಸಿದರು.
ಮಠದ ಅಧ್ಯಕ್ಷ ಕೆಂಚಪ್ಪ ಸೂರ್ವೇ, ಉಪಾಧ್ಯಕ್ಷ ಸಾಗರ ಕಡೂರ, ಕಾರ್ಯದರ್ಶಿ ಬಸವರಾಜ ಹಾವನೂರ ಹಾಗೂ ಸದಸ್ಯರು ಇದ್ದರು. ಚಳಗೇರಿಯ ಚನ್ನಯ್ಯ ಶಾಸ್ತ್ರೀ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net