

ಚೆನ್ನೈ: 41 ಮಂದಿ ಸಾವಿಗೆ ಕಾರಣವಾದ ಸೆ. 27ರ ದಳಪತಿ ವಿಜಯ್ ನೇತೃತ್ವದ ಟಿವಿಕೆ ಸಮಾವೇಶದಲ್ಲಿ ನಡೆದ ಕಾಲ್ತುಳಿತ ಘಟನೆ ಬಗ್ಗೆ ತಮಿಳು ಸೂಪರ್ ಸ್ಟಾರ್ ಮತ್ತು ರೇಸರ್ ಅಜಿತ್ ಕುಮಾರ್(Ajith Kumar) ಪ್ರತಿಕ್ರಿಯಿಸಿದ್ದು, ಘಟನೆಗೆ ಸಮಾಜವೇ ಸಾಮೂಹಿಕ ಹೊಣೆ ಹೊರಬೇಕು. ಒಬ್ಬ ವ್ಯಕ್ತಿ ಈ ಘಟನೆಗೆ ಕಾರಣನಲ್ಲ ಎಂದು ಹೇಳಿದ್ದಾರೆ. ಇನ್ನೂ ಅಜಿತ್ ಈ ಹೇಳಿಕೆ ದಳಪತಿ ವಿಜಯ್ ಅಭಿಮಾನಿಗಳಿಗೆ ಖುಷಿ ತಂದಿದೆ.
ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಜಿತ್, ಕರೂರಿನಲ್ಲಿ ನಡೆದ ದುರಂತಕ್ಕೆ ಕಾರಣವಾಗುವ ಎಲ್ಲಾ ಅಂಶಗಳನ್ನು ಉಲ್ಲೇಖಿಸಿ, ಕೇವಲ ಒಬ್ಬ ವ್ಯಕ್ತಿಯನ್ನು ಜವಾಬ್ದಾರರನ್ನಾಗಿ ಮಾಡಲು ಸಾಧ್ಯವಿಲ್ಲ.ಆ ವ್ಯಕ್ತಿ ಮಾತ್ರ ಜವಾಬ್ದಾರನಲ್ಲ, ನಾವೆಲ್ಲರೂ ಅದಕ್ಕೆ ಜವಾಬ್ದಾರರು. ಮೀಡಿಯಾ ಕೂಡ ಇದರಲ್ಲಿ ಪಾತ್ರ ವಹಿಸಬೇಕು ಎಂದು ದಳಪತಿ ವಿಜಯ್ ಒಬ್ಬರನ್ನೇ ಇದಕ್ಕೆ ಹೊಣೆ ಮಾಡಲಾಗಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಇನ್ನೂ ಈ ನನ್ನ ಹೇಳಿಕೆ ಒಬ್ಬ ವ್ಯಕ್ತಿಯ ಕ್ರಿಯೆಗಳಿಗಿಂತ ವಿಶಾಲವಾದ ಸಾಮಾಜಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುತ್ತದೆ. ಸಮಾಜದಲ್ಲಿ ಸಾಮೂಹಿಕ ಸಭೆಗಳನ್ನು ಸೇರಿಸುವುದು, ಸಿನಿಮಾ ಸೆಲೆಬ್ರಿಟಿಸ್ ಬಂದಾಗ ಜನ ಸೇರುವುದು ಒಂದು ಗೀಳಾಗಿದೆ. ಪ್ರದರ್ಶನಕ್ಕಾಗಿ ಜನಸಮೂಹ ಒಟ್ಟುಗೂಡುವುದು, ಒಟ್ಟುಗೂಡಿಸುವದನ್ನು ನಿಲ್ಲಿಸುವಂತೆ ಜನರನ್ನು ಒತ್ತಾಯಿಸಿದ್ದಾರೆ.
ಜನಸಮೂಹವನ್ನು ಒಟ್ಟುಗೂಡಿಸುವ ಗೀಳನ್ನು ಬಿಡಬೇಕು. ಇದೆಲ್ಲವೂ ಕೊನೆಗೊಳ್ಳಬೇಕು. ನನ್ನ ಪ್ರಕಾರ, ಕ್ರಿಕೆಟ್ ಪಂದ್ಯಗಳಿಗೆ ಜನಸಂದಣಿಯೂ ಇದೆ, ಆದರೆ ಅಲ್ಲಿ ನಡೆಯುವುದು ಕಾಣೋದಿಲ್ಲ. ಇದು ಸಿನಿಮಾ ನಟರು ಬಂದಾಗ ಮಾತ್ರ ಯಾಕೆ ನಡೆಯುತ್ತಿದೆ? ಇದು ಇಡೀ ಇಂಡಸ್ಟ್ರೀಯ ಇಮೇಜ್ಗೆ ಇಂತವುಗಳ ನಕರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತವೆ ಎಂದಿದ್ದಾರೆ. (ಏಜೆನ್ಸೀಸ್)