ಬೆಂಗಳೂರು: ಕರ್ನಾಟಕದ ಅಥ್ಲೀಟ್ ಸಿಂಧುಶ್ರೀ ಜಿ. ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ 65ನೇ ರಾಷ್ಟ್ರೀಯ ಅಂತರ ರಾಜ್ಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ ಮಹಿಳೆಯರ ಪೋಲ್ವಾಲ್ಟ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಮುಂಬರುವ ಏಷ್ಯನ್ ಗೇಮ್ಸ್ಗೆ (Asian Games) ಅರ್ಹತೆ ಸಂಪಾದಿಸಿದ್ದಾರೆ. ಜತೆಗೆ ರಾಜ್ಯದ ಓಟಗಾರ್ತಿಯರಾದ ಉನ್ನತಿ ಅಯ್ಯಪ್ಪ ಮತ್ತು ಪ್ರಕೃತಿ ರೂಪಾ ರಾವ್ ಕೂಡ ಏಷ್ಯಾಡ್ ಅರ್ಹತೆ ಗಳಿಸಿದ್ದಾರೆ.