

ಬೆಂಗಳೂರು: ಕರ್ನಾಟಕದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇಂದು ಆರು ಮಂದಿಯಲ್ಲಿ ಕೋವಿಡ್ ರೂಪಾಂತರಿ ತಳಿ ಒಮಿಕ್ರಾನ್ ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಇಂದು ದಕ್ಷಿಣ ಕನ್ನಡದ ಎರಡು ಶಿಕ್ಷಣ ಸಂಸ್ಥೆಗಳಿಂದ ಒಟ್ಟು 5 ಪ್ರಕರಣ ಪತ್ತೆಯಾದರೆ, ಯುಕೆಯಿಂದ ಆಗಮಿಸಿದ ಓರ್ವನಲ್ಲಿ ಒಮಿಕ್ರಾನ್ ಕಾಣಿಸಿದೆ. ದಕ್ಷಿಣ ಕನ್ನಡದ ಕ್ಲಸ್ಟರ್ ಒಂದರಲ್ಲಿ ಒಟ್ಟು 14 ಕೋವಿಡ್ ಪ್ರಕರಣ ದೃಢವಾಗಿವೆ. ಇದರಲ್ಲಿ 4 ಒಮಿಕ್ರಾನ್ ಪ್ರಕರಣವಾಗಿವೆ.
ಕ್ಲಸ್ಟರ್ ಎರಡರಲ್ಲಿ 19 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ 1 ಒಮಿಕ್ರಾನ್ ಪ್ರಕರಣ ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಟ್ವೀಟ್ನಲ್ಲಿ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.