ಮಹಿಳೆಯರಿಗೆ ರಾಜ್ಯ ಬಜೆಟ್​ನಲ್ಲಿ ಸಿಕ್ಕಿದ್ದೇನು?

budjet
Published on

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನಂದೇ ಮಂಡನೆಯಾದ ರಾಜ್ಯ ಬಜೆಟ್​ನಲ್ಲಿ ಸಿಎಂ ಯಡಿಯೂರಪ್ಪ, ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಯೋಜನೆಯಳನ್ನು ಘೋಷಿಸಿದ್ದಾರೆ.

  • ಜಿಲ್ಲಾ ಕೇಂದ್ರಗಳಲ್ಲಿ ತಲಾ ಎರಡು ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರೆದು ಉದ್ಯೋಗಿಗಳಿಗೆ ಅನುಕೂಲ ಕಲ್ಪಿಸುವುದು.
  • ಆಸ್ಪತ್ರೆ, ವೈದ್ಯಕೀಯ, ಆರೈಕೆ ಮತ್ತಿತರ ಸೇವಾ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಉದ್ಯಮಿಗಳಿಗೆ ಮಹಿಳಾ ಅಭಿವೃದ್ಧಿ ನಿಗಮ/ಕರ್ನಾಟಕ ಹಣಕಾಸು ಸಂಸ್ಥೆ ಮೂಲಕ 2 ಕೋಟಿ ರೂ.ವರೆಗೆ ಶೇ.4ರ ರಿಯಾಯಿತಿ ಬಡ್ಡಿದರದಲ್ಲಿ ಸಾಲ ಸೌಲಭ್ಯ
  • ಸಂಜೀವಿನಿ ವ್ಯಾಪ್ತಿಯ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳು ಕೇಟರಿಂಗ್​, ಸ್ವಚ್ಛತಾ ಕಾರ್ಯ, ಕೋಳಿ ಸಾಖಾಣಿಕೆ, ಕುರಿ ಸಾಕಾಣಿಕೆ, ಘನ ತ್ಯಾಜ್ಯ ನಿರ್ವಹಣೆ, ಸ್ವಚ್ಛತೆ, ನಿರ್ಮಾಣ ಮತ್ತಿತರ ಕ್ಷೇತ್ರಗಳ 6 ಸಾವಿರ ಅತಿ ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ಪಂಚಾಯತ್​ ರಾಜ್​ ಸಂಸ್ಥೆಗಳ ಮೂಲಕ ಬೆಂಬಲ. ಪರಿಣಾಮ 60 ಸಾವಿರ ಮಹಿಳೆಯರಿಗೆ ಸ್ವಯಂ ಉದ್ಯೋಗದ ಅವಕಾಶ
  • ಹಪ್ಪಳ, ಉಪ್ಪಿನಕಾಯಿ, ರೊಟ್ಟಿ, ಮಲಾಸೆಪುಡಿ ಮತ್ತಿತರ ಆಹಾರ ಪದಾರ್ಥಗಳನ್ನು ತಯಾರಿಸುವ ಮಹಿಳೇಯರ ಸಣ್ಣ ಉದ್ಯಮಗಳಿಗೆ ಆಹಾರ ಸುರಕ್ಷತೆ, ಪ್ಯಾಕೇಜಿಂಗ್​, ಬ್ರಾಂಡಿಂಗ್​, ರಸ್ತೆ ಬದಿ ಮಳಿಗೆಗಳ ಮತ್ತು ಆನ್​ಲೈನ್​ ಮೂಲಕ ವ್ಯಾಪಾರ ವಹಿವಾಟಿಗೆ ವ್ಯವಸ್ಥೆ
  • ಎಪಿಎಂಸಿಗಳಲ್ಲಿ ಮಹಿಳೆಯರಿಗೆ ಶೇ.10ರಷ್ಟು ಮೀಸಲಾತಿ
  • ನಿರ್ಭಯಾ ಯೋಜನೆ ಅಡಿಯಲ್ಲಿ 7,500 ಸಿಸಿಟಿವಿ ಅಳವಡಿಕೆ
  • ಮಹಿಳೆಯರ ಅಭಿವೃದ್ಧಿಗೆ 37,000 ಕೋಟಿ ರೂ. ಮೀಸಲು
  • ಬಿಎಂಟಿಸಿ ಬಸ್​ಗಳಲ್ಲಿ ಮಹಿಳೆಯರಿಗೆ ವನಿತಾ ಸಂಗಾತಿ ಬಸ್ಪಾಸ್ ವ್ಯವಸ್ಥೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net