

ಬೆಂಗಳೂರ: ತೀವ್ರ ಕೂತೂಹಲ ಮೂಡಿಸಿರುವ ಕರೊನಾ ಸಂಕಷ್ಟದ ನಂತರದ ರಾಜ್ಯ ಬಜೆಟ್ ಆರಂಭವಾಗಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಬಜೆಟ್ ಪ್ರತಿಗಳನ್ನು ಓದಲು ಆರಂಭಿಸಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆ ಮಂಡಿಸುತ್ತಿರುವ ಬಜೆಟ್ ಇದಾಗಿದ್ದು, ಸಹಜವಾಗಿಯೇ ಜನರ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಇಂಧನ ದರ ಏರಿಕೆಯಿಂದ ಅಗತ್ಯವಸ್ತುಗಳ ಬೆಲೆ ಗಗನಮುಖಿಯಾಗಿ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಈ ಬಜೆಟ್ ತುಸು ನೆಮ್ಮದಿ ತರಲಿದೆಯೇ? ಈ ಬಜೆಟ್ನಲ್ಲಿ ಏನೇನಿರುತ್ತದೆ ಎಂಬ ಕಂಪ್ಲೀಟ್ ಚಿತ್ರಣವನ್ನು ದಿಗ್ವಿಜಯ 24x7 ನೇರಪ್ರಸಾರದಲ್ಲಿ ವೀಕ್ಷಿಸಬಹುದಾಗಿದ್ದು, ಬಜೆಟ್ ಚರ್ಚೆಯಲ್ಲಿ ಪಾಲ್ಗೋಳ್ಳುವ ತಜ್ಞರ ಮಾತುಗಳಿಂದ ಸರಳವಾಗಿ ಬಜೆಟ್ ಅರ್ಥ ಮಾಡಿಕೊಳ್ಳಬಹುದಾಗಿದೆ...