

ಬೆಂಗಳೂರು: ಕರ್ನಾಟಕದಲ್ಲಿ ಈವರೆಗೆ 1,11,57,883 ಜನರು ಎರಡೂ ಡೋಸ್ ಕರೊನಾ ಲಸಿಕೆಗಳನ್ನು ಪಡೆದು ಕರೊನಾ ವಿರುದ್ಧ ಸುರಕ್ಷತೆಯನ್ನು ಗಳಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯವು ದೇಶದಲ್ಲೇ 6ನೇ ಸ್ಥಾನವನ್ನು ಗಳಿಸಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಟ್ವಿಟರ್ನಲ್ಲಿ ತಿಳಿಸಿದೆ.
ದೇಶದಲ್ಲೇ ಅತಿಹೆಚ್ಚು ಪೂರ್ಣ ಲಸಿಕೀಕರಣವಾಗಿರುವ ರಾಜ್ಯವೆಂದರೆ ಮಹಾರಾಷ್ಟ್ರ. ಸೆಪ್ಟೆಂಬರ್ 5 ರಂದು ಬೆಳಿಗ್ಗೆ 8 ಗಂಟೆಗೆ ಪ್ರಕಟವಾಗಿರುವ ಕೇಂದ್ರ ಸರ್ಕಾರದ ಕೋವಿನ್ ಪಟ್ಟಿಯಲ್ಲಿ 2ನೇ ಡೋಸ್ ಲಸಿಕೀಕರಣದ ಕೆಲವು ರಾಜ್ಯವಾರು ವಿವರಗಳು ಹೀಗಿವೆ:-
ಮಹಾರಾಷ್ಟ್ರ: 1,71,90,818 ಜನರು
ಉತ್ತರ ಪ್ರದೇಶ: 1,27,53,189 ಜನರು
ಗುಜರಾತ್: 1,25,24,914 ಜನರು
ಪಶ್ಚಿಮ ಬಂಗಾಳ: 1,21,91,426 ಜನರು
ರಾಜಸ್ಥಾನ: 1,14,83,961 ಜನರು
ಕರ್ನಾಟಕ: 1,11,57,883 ಜನರು
ಈವರೆಗೆ ದೇಶಾದ್ಯಂತ 15,89,31,429 ಜನರು ಪೂರ್ಣ ಲಸಿಕೀಕರಣ ಹೊಂದಿದ್ದಾರೆ. ಕರ್ನಾಟಕದಲ್ಲಿ ಈವರೆಗೆ 4,47,97,767 ಡೋಸ್ ಕರೊನಾ ಲಸಿಕೆಗಳನ್ನು ನೀಡಲಾಗಿದ್ದು, ಡೋಸ್ಗಳ ವಿಷಯದಲ್ಲೂ ರಾಜ್ಯ ಆರನೇ ಸ್ಥಾನದಲ್ಲಿದೆ.