ಎಲ್ಲ ಅಂಗಡಿ ಕ್ಲೋಸ್ ಆಗಿರತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

lock
Published on

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್​ ಲಾಕ್​ಡೌನ್​ನೊಂದಿಗೆ 14 ದಿನಗಳ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿತ್ತು. ಇದೀಗ ಒಂದಿಷ್ಟು ಬದಲಾವಣೆಗಳೊಂದಿಗೆ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಪರಿಷ್ಕೃತ ಮಾರ್ಗಸೂಚಿಯ ಅನುಸಾರ ರಾಜ್ಯದಲ್ಲಿ ಅಗತ್ಯ ಸಾಮಾಗ್ರಿಗಳ ಅಂಗಡಿಗಳನ್ನು ಹೊರೆತುಪಡಿಸಿ ಬೇರೆಲ್ಲ ಅಂಗಡಿಗಳನ್ನು ಮುಚ್ಚಲಾಗುವುದು. ಮೊಬೈಲ್ ಶಾಪ್​, ಟಿವಿ-ಎಲೆಕ್ಟ್ರಾನಿಕ್​ ಶೋ ರೂಂ, ಬ್ಯಾಂಗಲ್​ ಸ್ಟೇಷನರಿ ಅಂಗಡಿಗಳು, ಚಿನ್ನಾಭರಣ ಅಂಗಡಿ, ಚಪ್ಪಲಿ ಅಂಗಡಿ, ಬಟ್ಟೆ ಅಂಗಡಿ ಸೇರಿ ಎಲ್ಲವನ್ನು ಮುಚ್ಚುವಂತೆ ತಿಳಿಸಲಾಗಿದೆ.

ಹೋಟೆಲ್​, ರೆಸ್ಟೋರೆಂಟ್​, ಬಾರ್​ಗಳನ್ನು ತೆರೆಯುವುದಕ್ಕೆ ಅವಕಾಶ ಕೊಡಲಾಗಿದೆಯಾದರೂ ಕೇವಲ ಪಾರ್ಸೆಲ್​ ಕೊಡುವಂತೆ ಆದೇಶಿಸಲಾಗಿದೆ. ಉಳಿದಂತೆ ಬಸ್ಸು, ಮೆಟ್ರೋ, ರೈಲು, ಆಟೋ, ಕ್ಯಾಬ್​ಗಳ ಸೇವೆ ಎಂದಿನಂತೆ ಇರಲಿವೆ. ಬ್ಯಾಂಕ್​, ಎಟಿಎಂ, ಮಾಧ್ಯಮ, ಇ ಕಾಮರ್ಸ್​ ಸೇವೆ ಖಾಸಗಿ ಸೆಕ್ಯುರಿಟಿ ಸಂಸ್ಥೆ, ಕಟಿಂಗ್​ ಶಾಪ್​, ಬ್ಯೂಟಿ ಪಾರ್ಲರ್​ಗಳನ್ನು ಹೆಚ್ಚಿನ ಸುರಕ್ಷತೆಯೊಂದಿಗೆ ಕೆಲಸ ಮಾಡಲು ಅನುಮತಿ ನೀಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net