ಹೊಸ ಬಸ್ ಖರೀದಿಗೆ ಬರೋಬ್ಬರಿ 500 ಕೋಟಿ ರೂ. ಅನುದಾನ ನೀಡಿದ ಸರ್ಕಾರ

KSRTC BUS
KSRTC BUS
Published on

ಬೆಂಗಳೂರು: ಶಕ್ತಿ ಯೋಜನೆ ಶುರುವಾದ ಮೇಲೆ ರಾಜ್ಯದ ಸಾರಿಗೆ ಸಂಸ್ಥೆ ಸೊರಗುತ್ತಿದೆ ಎಂದು ಆರೋಪಿಸುತ್ತಿದ್ದವರಿಗೆ ಇದೀಗ ರಾಜ್ಯ ಸರ್ಕಾರ ಶಾಕ್ ನೀಡಿದೆ. ನೂತನ ಬಸ್‍ ಖರೀದಿ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಇದೀಗ ಸಾರಿಗೆ ಸಂಸ್ಥೆಗಳಿಗೆ ಬರೋಬ್ಬರಿ 500 ಕೋಟಿ ರೂ. ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ

ಕರ್ನಾಟಕದಲ್ಲಿರುವ ನಾಲ್ಕು ಸಾರಿಗೆ ನಿಗಮಗಳಿಗೆ 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ನೂತನ ಬಸ್ ಖರೀದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಕೆಎಸ್ಆರ್ಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆಗೆ ತಲಾ 100 ಕೋಟಿ ರೂ. ನಿಗದಿ ಮಾಡಲಾಗಿದ್ದು ಬಿಎಂಟಿಸಿ ಹಾಗೂ ವಾಯವ್ಯ ಸಾರಿಗೆ ತಲಾ 150 ಕೋಟಿ ರೂ. ನೀಡಲಾಗಿದೆ.

ಹೊಸ ಬಸ್ ಖರೀದಿ ಸೇರಿದಂತೆ ವಿವರವಾದ ಪ್ರಸ್ತಾವನೆ ಸಲ್ಲಿಸಲು ಪತ್ರ ಬರೆಯುವಂತೆ ನಾಲ್ಕೂ ಸಾರಿಗೆ ನಿಗಮಗಳಿಗೆ ಪತ್ರ ಮುಖೇನ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ. ಈ ಹಣ ಅನುದಾನದ ಬಳಕೆ ಕುರಿತ ವಿವರ ಪ್ರಸ್ತಾವನೆ ಸಲ್ಲಿಕೆಯಾಗುತ್ತಿದ್ದಂತಯೇ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಪತ್ರದಲ್ಲೇನಿದೆ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net