ಲಾಲ್​​​​ ಬಾಗ್​​​ನಲ್ಲಿ ಇಂದಿನಿಂದ ಸಾರ್ವಜನಿಕರಿಗೆ ಫ್ಲವರ್ ಶೋ ವೀಕ್ಷಣೆಗೆ ಅವಕಾಶ; ಹರಿದು ಬರುತ್ತಿರುವ ಜನಸಾಗರ

flowershow
Published on

ಬೆಂಗಳೂರು: ಇಂದಿನಿಂದ ಸಸ್ಯಕಾಶಿ ಲಾಲ್​​​​ ಬಾಗ್​​​ನಲ್ಲಿ ಸಾರ್ವಜನಿಕರಿಗೆ ಫ್ಲವರ್ ಶೋ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಶನಿವಾರ ಮತ್ತು ಭಾನುವಾರ ರಜಾದಿನಗಳಲ್ಲಿ ವಯಸ್ಕರಿಗೆ 80 ರೂ. ಹಾಗೂ ಮಕ್ಕಳಿಗೆ 30 ರೂ ಟಿಕೆಟ್ ನಿಗದಿಪಡಿಸಲಾಗಿದೆ. ಫ್ಲವರ್ ಶೋ ಜೊತೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ವಿಕೆಂಡ್ ಹಿನ್ನೆಲೆಯಲ್ಲಿ ಲಾಲ್ ಬಾಗ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಮೆಟ್ರೋ ಹಾಗೂ ಬಿಎಂಟಿಸಿ ಬಸ್ಸುಗಳನ್ನು ಬಳಸಿಕೊಳ್ಳುವಂತೆ ತೋಟಗಾರಿಕೆ ಇಲಾಖೆ ಮನವಿ ಮಾಡಿದೆ.

ಇದು ಲಾಲ್​​​​​​ ಬಾಗ್​​​​​ನಲ್ಲಿ 214 ನೇ ಫ್ಲವರ್ ಶೋ. ಲಾಲ್ ಬಾಗ್ ನಲ್ಲಿ ಹೂಗಳಿಂದ ಕರ್ನಾಟಕ ಶಕ್ತಿಸೌಧ ಕಂಗೊಳಿಸುತ್ತಿದ್ದು, 7 ಲಕ್ಷ ಹೂಗಳಿಂದ ವಿಧಾನಸೌಧ ನಿರ್ಮಾಣ ಮಾಡಲಾಗಿದೆ. ಫ್ಲವರ್ ಶೋ ವೀಕ್ಷಣೆಗೆ ಜನಸಾಗರವೇ ಹರಿದು ಬರುತ್ತಿದೆ. ಫ್ಲವರ್ ಶೋ ಜೊತೆಗೆ ಇಕ್ಕೆಬನದ ಹಲವು ಕಲಾಕೃತಿಗಳ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ.

ಲಾಲ್​​​​ ಬಾಗ್​​​ ನಾಲ್ಕು ಗೇಟ್ ಗಳಲ್ಲಿ ಬಾಡಿಗಾರ್ಡ್ಸ್, ತೋಟಾಗಾರಿಕಾ ಸಿಬ್ಬಂದಿ ಹಾಗೂ 300 ಜನ ಪೋಲಿಸರನ್ನು ನಿಯೋಜಿಸಲಾಗಿದೆ. ಇಂದಿನಿಂದ ಆಗಸ್ಟ್ 15 ರವರೆಗೂ ಫ್ಲವರ್ ಶೋ ನಡೆಯುತ್ತಿದ್ದು, ಫ್ಲವರ್ ಶೋ ನಲ್ಲಿ 130 ಬಗೆಯ ಹೂಗಳು ಕಂಗೊಳಿಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net