

ಬೆಂಗಳೂರು: ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಕೆಂಪೇಗೌಡ ಏರ್ಪೋಟ್ನಿಂದ ದೆಹಲಿಯತ್ತ ಹೊರಟಿರುವ ಸಿಟಿ ರವಿ, 3 ಗಂಟೆಯ ಇಂಡಿಗೋ ವಿಮಾನದಲ್ಲಿ ತೆರಳುತ್ತಿದ್ದಾರೆ. ಈ ವೇಳೆ ಏರ್ಪೋರ್ಟ್ನಲ್ಲಿ ಮಾತನಾಡಿದ ಸಿಟಿ ರವಿ, ದೆಹಲಿಯ ನನ್ನ ಕಚೇರಿಯನ್ನ ಮುಚ್ಚಿದ್ದೇನೆ. ಹೀಗಾಗಿ ಸಿಬ್ಬಂದಿಗೆ ಧನ್ಯವಾದ ತಿಳಿಸಲು ಹೋಗುತ್ತಿದ್ದೇನೆ. ಹಾಗೆ ಕೆಲ ಸಹೋದ್ಯೋಗಿಗಳನ್ನು ಸಹ ಭೇಟಿಯಾಗಿ ಮೂರು ನಾಲ್ಕು ದಿನಗಳಲ್ಲಿ ಬರುತ್ತೇನೆ ಎಂದರು.
ಯಾರಿಗೆ ಬೇಕಾದರೂ ರಾಜ್ಯಾಧ್ಯಕ್ಷ ಸ್ಥಾನ ಕೊಡಲಿ ನಮ್ಮದೇನು ತಕರಾರಿಲ್ಲ. ಆದರೆ ಯಾವಾಗ ಮಾಡ್ತಾರೆ ಅನ್ನೋದು ನನಗೆ ಗೊತ್ತಿಲ್ಲ ಎಂದು ತಿಳಿಸಿದರು. ತಿರುಪತಿಗೆ ಕೆಎಂಎಪ್ ನಂದಿನಿ ತುಪ್ಪ ಸರಬರಾಜು ಸ್ಥಗಿತ ಪ್ರಕರಣದ ಕುರಿತೂ ಮಾತನಾಡಿದ ಸಿಟಿ ರವಿ, 2021 ರಲ್ಲಿ ತುಪ್ಪ ಸರಬರಾಜು ಸ್ಥಗಿತಗೊಂಡಿದ್ರು ಸಹ ಅದನ್ನ ಮಾತನಾಡಿ ಮತ್ತೆ ಮುಂದುವರೆಸಿದ್ರು ಅನ್ನೋದು ನನಗಿರುವ ಮಾಹಿತಿ. L1 ಆದವರ ಜೊತೆ 35% ಮಾತುಕತೆ ಮಾಡಿಕೊಂಡು ಸಪ್ಲೆ ಮಾಡ್ತಿದಿದ್ದು ನಿಜ ಎಂದು ತಿಳಿಸಿದರು.
ಬಹುದೊಡ್ಡ ಗ್ರಾಹಕರ ಜೊತೆ ವ್ಯವಹಾರ ಉಳಿಸಿಕೊಳ್ಳಬೇಕು ಎಂದ ಸಿಟಿ ರವಿ, ಅದರಿಂದ ಲಾಭ ಯಾರಿಗೆ ನಮಗೆ ತಾನೆ ಅದನ್ನ ಮಾಡಬೇಕು ಎಂದರು. ಬಿಜೆಪಿ ವಿರುದ್ದ ಶೆಟ್ಟರ್ ಲೀಡರ್ ಲೆಸ್ ಪಾರ್ಟಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ ಶೆಟ್ಟರ್ ಅವರನ್ನ ಲೀಡರ್ ಮಾಡಿದ್ದು ಯಾರು ಅಂತ ಕೇಳಿ ಎಂದು ಟಾಂಗ್ ಕೊಟ್ಟರು.