'ನಂದಿನಿ' ಉತ್ಪನ್ನಗಳ ರಾಯಭಾರಿಯಾಗಿ ನಟ ಶಿವರಾಜ್​​​​​​​ಕುಮಾರ್ ನೇಮಕ

KMF
Published on

ಬೆಂಗಳೂರು: 'ನಂದಿನಿ' ಹಾಲಿನ ಉತ್ಪನ್ನಗಳ ರಾಯಭಾರಿಯಾಗಿ ನಟ ಶಿವರಾಜ್​​​​​​​ಕುಮಾರ್ ನೇಮಕವಾಗಿದ್ದಾರೆ. ಕೆಎಂಎಫ್ ಅಧ್ಯಕ್ಷ ಭೀಮ ನಾಯಕ್ ಹಾಗೂ ಎಂಡಿ ಜಗದೀಶ್ ಅವರ ಮನವಿಗೆ ಸ್ಪಂದಿಸಿದ ಶಿವರಾಜ್​​​​​​​ಕುಮಾರ್ ರಾಯಭಾರಿಯಾಗಲು ಒಪ್ಪಿಕೊಂಡಿದ್ದಾರೆ.

ಈ ಹಿಂದೆ ದಿವಂಗತ ಪುನೀತ್ ರಾಜಕುಮಾರ್ ಕೆಎಮ್ಎಫ್ ರಾಯಭಾರಿಯಾಗಿದ್ದರು. ಇದೀಗ ಶಿವರಾಜ್​​​​​​​ಕುಮಾರ್ ನಂದಿನಿ ಹಾಲಿನ ಉತ್ಪನ್ನಗಳ ರಾಯಭಾರಿಯಾಗಿ ನೇಮಕವಾಗಿದ್ದಾರೆ. ನಂದಿನಿ ಹಾಲಿನ ರಾಯಭಾರಿಯಾಗಿ ನೇಮಕಗೊಂಡ ನಟ ಶಿವರಾಜ್ ಕುಮಾರ್ ಅವರಿಗೆ ಅಧ್ಯಕ್ಷ ಬೀಮಾನಾಯಕ್ ಹೂಗುಚ್ಚ ನೀಡಿ ಅಭಿನಂದಿಸಿದ್ದಾರೆ.

ಡಾ.ರಾಜ್ ಕುಮಾರ್ ಕೂಡ ರೈತರ ಮೇಲಿನ ಕಳಕಳಿಯಿಂದ ನಂದಿನಿ ಉತ್ಪನ್ನಗಳ ಪರವಾಗಿ ಉಚಿತವಾಗಿ ಪ್ರಚಾರ ನಡೆಸಿದ್ದರು. ಡಾ.ರಾಜ್ 1990ರಲ್ಲಿ ನಂದಿನಿ ಹಾಲಿನ ಪ್ರಚಾರ ರಾಯಭಾರಿಯಾಗಿ ಕಾಣಿಸಿಕೊಂಡಿದ್ದರು. ಅದು ಟವಿ ಜಾಹೀರಾತೊಂದರಲ್ಲಿ ರಾಜ್ ಅವರ ಮೊದಲ ಮತ್ತು ಕಡೆಯ ನಟನೆಯಾಗಿತ್ತು.

ತಮ್ಮ ತಂದೆಯ ಪರಂಪರೆಯನ್ನು ಮುಂದುವರೆಸುವ ನಿಟ್ಟಿನಲ್ಲಿಯೇ ಪುನೀತ್ ರಾಜ್ ಕುಮಾರ್ ಕೂಡ ನಂದಿನಿ ಪರವಾಗಿ ಉಚಿತವಾಗಿ ಪ್ರಚಾರ ಮಾಡುವುದಾಗಿ ಹೇಳಿಕೊಂಡಿದ್ದರು. ಅದರಂತೆ 2009ರಲ್ಲಿ ಅವರು ಕೆಎಂಎಫ್ ಜೊತೆ ಈ ಕುರಿತು ಒಪ್ಪಂದಕ್ಕೆ ಸಹಿ ಹಾಕಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net