ಬೆಂಗಳೂರು: ನಾಳೆ ರಾತ್ರಿ 9 ಗಂಟೆಯಿಂದ 14 ದಿನಗಳ ಲಾಕ್ಡೌನ್ ಅನ್ನು ರಾಜ್ಯದಲ್ಲಿ ಘೋಷಿಸಲಾಗಿದೆ. ಈ ಸಮಯದಲ್ಲಿ ಏನಿರುತ್ತೆ? ಏನಿರಲ್ಲ ಎನ್ನುವ ಬಗ್ಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಲಾಕ್ಡೌನ್ ಮಾರ್ಗಸೂಚಿಯ ಪ್ರಕಾರ, ರಾಜ್ಯದಲ್ಲಿ 14 ದಿನಗಳ ಕಾಲ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿ ಯಾವುದೇ ಬಸ್ ಸೌಲಭ್ಯ ಲಭ್ಯವಿರುವುದಿಲ್ಲ. ಮೆಟ್ರೋ ರೈಲು ಸೇವೆಯನ್ನೂ ಸ್ಥಗಿತಗೊಳಿಸಲಾಗುವುದು. ಆಟೋ, ಕ್ಯಾಬ್, ಖಾಸಗಿ ವಾಹನಗಳ ಸಂಚಾರಕ್ಕೂ ನಿರ್ಬಂಧವಿರಲಿದೆ. ತುರ್ತು ಸೇವೆಗೆ ಆಟೋ ಬಳಸಿಕೊಳ್ಳುವಂತೆ ತಿಳಿಸಲಾಗಿದೆ. ಉಳಿದಂತೆ ರೈಲುಗಳು ಮತ್ತು ವಿಮಾನಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಅವುಗಳ ಟಿಕೆಟ್ಗಳನ್ನು ಜನರು ಸಂಚಾರಕ್ಕೆ ಪಾಸ್ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ.
ಶಾಲಾ, ಕಾಲೇಜುಗಳು ಮುಚ್ಚಿರಲಿವೆ. ಆನ್ಲೈನ್ ತರಗತಿ ನಡೆಸಲು ಅನುಮತಿಯಿದೆ. ಹೋಟೆಲ್, ರೆಸ್ಟೋರೆಂಟ್, ಬಾರ್, ಎಂಆರ್ಪಿಗಳಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶವಿದೆ. ಸಿನಿಮಾ ಹಾಲ್, ಜಿಮ್, ಕ್ರೀಡಾಂಗಣಗಳು, ಸ್ವಿಮ್ಮಿಂಗ್ ಪೂಲ್ಗಳನ್ನು ಮುಚ್ಚಲಾಗುವುದು. ಎಲ್ಲ ಧಾರ್ಮಿಕ ಸ್ಥಳಗಳು ಬಾಗಿಲು ಮುಚ್ಚಿರಲಿವೆ.
ಆಸ್ಪತ್ರೆಗಳು, ತುರ್ತು ಸೇವೆಗಳು, ವೈದ್ಯಕೀಯ ವಲಯಕ್ಕೆ ಸೇರಿದ ಕೇಂದ್ರಗಳು, ಗಾರ್ಮೆಂಟ್ಗಳು, ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳು, ಸರ್ಕಾರಿ ಕಚೇರಿಗಳು (ಶೇ. 50 ಸಿಬ್ಬಂದಿ) ಎಂದಿನಂತೆ ತೆರೆದಿರಲಿವೆ. ಈ ಸ್ಥಳಗಳಲ್ಲೂ ಸೂಕ್ತ ಮುನ್ನೆಚ್ಚರಿಕೆಗಳನ್ನು ಪಾಲಿಸವಂತೆ ತಿಳಿಸಲಾಗಿದೆ. (ಏಜೆನ್ಸೀಸ್)
ಇನ್ನಷ್ಟು ಮಾಹಿತಿಗಾಗಿ: