Karnataka Information Commission| ಮೂವರು ಮಾಹಿತಿ ಆಯುಕ್ತರನ್ನಾಗಿ ನೇಮಿಸಿ ಆದೇಶಿಸಿದ ರಾಜ್ಯಪಾಲರು

ವಿಜಯವಾಣಿ (51)
Published on

Bengaluru: ಕರ್ನಾಟಕ ಮಾಹಿತಿ ಆಯೋಗದಲ್ಲಿ(Karnataka Information Commission) ಖಾಲಿ ಇದ್ದ ಮೂರು ಮಾಹಿತಿ ಆಯುಕ್ತ ಹುದ್ದೆಗೆ ರಾಜ್ಯ ಸರ್ಕಾರ ಕಳಿಸಿದ್ದ ಮೂರು ಹೆಸರುಗಳಿಗೆ ರಾಜ್ಯಪಾಲ ಗೆಹ್ಲೋಟ್ ಅನುಮೋದಿಸಿ ಮೂವರನ್ನು ಮಾಹಿತಿ ಆಯುಕ್ತರನ್ನಾಗಿ ನೇಮಿಸಿ ಬುಧವಾರ(ಅ. 15) ಅಧಿಕೃತ ಆದೇಶ ಹೊರಡಿಸಿದ್ದಾರೆ.

ಕಳೆದ ವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ರಾಜ್ಯ ಸರ್ಕಾರದ ವತಿಯಿಂದ ನಿವೃತ್ತ ಐಎಎಸ್ ಅಧಿಕಾರಿ ವಿನ್ಸೆಂಟ್ ಡಿಸೋಜಾ, ಹಿರಿಯ ಪತ್ರಕರ್ತರಾದ ವೆಂಕಟೇಶ್ ಸಿಂಗ್ ಹಾಗೂ ಡಾ.ಮಹೇಶ ವಾಳ್ವೇಕರ ಅವರು ಮಾಹಿತಿ ಆಯುಕ್ತರಾಗಿ ನೇಮಿಸುವಂತೆ ರಾಜ್ಯ ಸರ್ಕಾರ ಪ್ರಸ್ತಾವನೆ ಕಳುಹಿಸಿತ್ತು.

ರಾಜ್ಯ ಸರ್ಕಾರ ಕಳುಹಿಸಿದ ಹೆಸರುಗಳಿಗೆ ಅನುಮೋದಿಸಿರುವ ರಾಜ್ಯಪಾಲರು ಬೆಂಗಳೂರು ವಿಭಾಗದ ಮಾಹಿತಿ ಆಯುಕ್ತರನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ವಿನ್ಸೆಂಟ್ ಡಿಸೋಜಾ, ಡಾ.ಮಹೇಶ ವಾಳ್ವೇಕರ, ಕಲಬುರಗಿ ವಿಭಾಗದ ಆಯುಕ್ತರನ್ನಾಗಿ ವೆಂಕಟೇಶ್ ಸಿಂಗ್​ ಅವರನ್ನು ನೇಮಿಸಿ ಆದೇಶಿಸಿದ್ದಾರೆ. 

ಪ್ರಸ್ತುತ ವಿಧಾನ ಪರಿಷತ್ತಿನ ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಮಹೇಶ ವಾಳ್ವೇಕರ ಕಳೆದ ೨೪ ವರ್ಷಗಳಿಂದ ವಿದ್ಯುನ್ಮಾನ, ಬಾನುಲಿ ಹಾಗೂ ಮುದ್ರಣ ಮಾಧ್ಯಮದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net