

Patna: ಮುಂದಿನ ತಿಂಗಳು ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದ್ದು, ಇಂದು(ಅ. 15) ಬಿಜೆಪಿ ಬಿಡುಗಡೆ ಮಾಡಿದ 2ನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಖ್ಯಾತ ಜಾನಪದ ಮತ್ತು ಭಕ್ತಿಗೀತೆ ಗಾಯಕಿ ಮೈಥಿಲಿ ಠಾಕೂರ್ಗೆ Maithili Thakur ಅಲಿನಗರ್ದಿಂದ ಸ್ಪರ್ಧಿಸಲು ಅವಕಾಶ ನೀಡಿದೆ.
243 ಸ್ಥಾನಗಳ ಬಿಹಾರ ವಿಧಾನಸಭಾ ಚುನಾವಣೆ ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ. ನಿನ್ನೆ ಪಾಟ್ನಾದಲ್ಲಿ ಗಾಯಕಿ ಮೈಥಿಲಿ ಬಿಜೆಪಿ ಸೇರ್ಪಡೆಯಾಗಿದ್ದರು.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ್ದ ಅವರು, ನಾನು ಪ್ರಧಾನಿ ಮೋದಿ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಂದ ಪ್ರಭಾವಿತಳಾಗಿದ್ದೇನೆ. ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ರಾಜಕೀಯ ಪಕ್ಷ ಸೇರಿದ್ದು ರಾಜಕೀಯ ಮಾಡಲು ಅಲ್ಲ, ಸಮಾಜ ಸೇವೆ ಮಾಡಲು, ಸಿದ್ದಾಂತವನ್ನು ಪ್ರತಿಯೊಬ್ಬರಿಗೆ ತಲುಪಿಸಲು ಸೇರಿದ್ದೇನೆ. ನಾನು ಮಿಥಿಲಾದ ಮಗಳು, ನನ್ನ ಆತ್ಮವು ಮಿಥಿಲಾದಲ್ಲಿ ಇದೆ. ಪಕ್ಷ ಏನು ಜವಾಬ್ದಾರಿ ನೀಡುತ್ತೋ ಅದನ್ನು ನಿರ್ವಹಿಸುತ್ತೇನೆ ಎಂದು ಹೇಳಿದ್ದರು. (ಏಜೆನ್ಸೀಸ್)