

ಬೆಂಗಳೂರು: ಸಾಹಿತಿ ಪ್ರೊ ಅಮರೇಶ ನುಗಡೋಣಿ, ಕೆ. ಷರೀಫಾ, ಡಾ. ಬಂಜಗೆರೆ ಜಯಪ್ರಕಾಶ್, ಡಾ. ನಟರಾಜ್ ಹುಳಿಯಾರ್, ನಟರಾಜ ಬೂದಾಳು, ಬಿ. ಪೀರ್ ಬಾಷಾ, ಕೆ.ಪಿ. ಶ್ರೀಪಾಲ್, ಚ.ಹ. ರಘುನಾಥ್, ಆಯೆಷಾ ಫರ್ಜಾನಾ, ಎನ್.ಎ. ಎಂ ಇಸ್ಮಾಯಿಲ್, ಡಾ.ಎಚ್.ಎಸ್. ಅನುಪಮಾ, ಸಿದ್ದಪ್ಪ ಮೂಲಗೆ ಸೇರಿದಂತೆ ಹಲವರನ್ನು ವಿವಿಧ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಆಗಸ್ಟ್ 27ರಂದು ಈ ಅಧಿಸೂಚನೆ ಹೊರಡಿಸಲಾಗಿದ್ದು, ಈ ಬಾರಿ ಸರ್ಕಾರ ಪರಿಷಶಿಷ್ಟರು, ಹಿಂದುಳಿದ ವರ್ಗ ಹಾಗು ಅಲ್ಪಸಂಆಖ್ಯಾತ ಸಮುದಾಯದ ಶಿಕ್ಷಣ ತಜ್ವರಿಗೆ ಆದ್ಯತೆ ನೀಡಿದೆ. ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡವರ ಪಟ್ಟಿ ಕೆಳಗಿನಂತಿದೆ: