

ಬೆಂಗಳೂರು: ರಾಜ್ಯದಲ್ಲಿ ಇಷ್ಟು ದಿನಗಳವರೆಗೆ ಸ್ವಲ್ಪ ನಿಧಾನವಾಗಿ ಏರುತ್ತಿದ್ದ ಸೋಂಕಿತರ ಸಂಖ್ಯೆ ಕಳೆದೆರಡು ದಿನಗಳಿಂದ ದಿಧೀರನೆ ಏರಿಕೆ ಕಾಣುತ್ತಿದೆ. ದಾವಣಗೆರೆಯಲ್ಲಿ ಒಂದೇ ದಿನ 21 ಮಂದಿಯಲ್ಲಿ ಸೋಂಕು ಪ್ರಕರಣ ದಾಖಲಾಗಿ ಆಘಾತ ಮೂಡಿಸಿರುವ ಬೆನ್ನಲ್ಲೇ ಇದೀಗ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಸೋಂಕಿತರ ಸಂಕ್ಯೆ ಹೆಚ್ಚುತ್ತಲೇ ಸಾಗಿದೆ.
ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯವರೆಗೆ ಒಟ್ಟು 37 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 651ಕ್ಕೆ ಏರಿಕೆಯಾಗಿದೆ. ಇದರಲ್ಲಿ 321 ಮಂದಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. 27 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ. ಉಳಿದಿರುವ 302 ಮಂದಿಯಲ್ಲಿ 296 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಆರು ಮಂದಿಯನ್ನು ಐಸಿಯುನಲ್ಲಿ ಇರಿಸಲಾಗಿದೆ.
ಒಂದೇ ಒಂದು ನೆಮ್ಮದಿಯ ಸಂಗತಿ ಎಂದರೆ ಆಸ್ಪತ್ರೆಯಲ್ಲಿ ಇರುವವರಿಗಿಂತ ಬಿಡುಗಡೆಯಾಗಿರುವವರ ಸಂಖ್ಯೆಯೇ ಅಧಿಕವಾಗಿದೆ.
ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ ಕಂಡುಬಂದ ಹೊಸ ಸೋಂಕಿತರ ವಿವರ ಹೀಗಿದೆ: ದಾವಣಗೆರೆಯಲ್ಲಿ 21, ಬೀದರ್ನಲ್ಲಿ 7 ಹಾಗೂ ಮಂಡ್ಯದಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ಬೆಂಗಳೂರು ನಗರ, ದಾವಣಗೆರೆ
ಚಿಕ್ಕಬಳ್ಳಾಪುರ, ಹಾವೇರಿ ಜಿಲ್ಲೆಯ ಸವಣೂರು, ವಿಜಯಪುರ, ಕಲಬುರಗಿ, ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ತಲಾ ಒಂದೊಂದು ಪ್ರಕರಣಗಳು ವರದಿಯಾಗಿವೆ.
ಇದನ್ನೂ ಓದಿ: ಬಾರ್ಗಳ ಮುಂದೆ ಮಹಿಳೆಯರದ್ದೂ ಕಾರುಬಾರು!
ನಿಮ್ಮ ಜಿಲ್ಲೆಯ ವಿವರ ಇಲ್ಲಿದೆ ನೋಡಿ: