

ಬೆಂಗಳೂರು: ಕರ್ನಾಟಕದಲ್ಲಿ ಗುರುವಾರ 1,236 ಜನರಲ್ಲಿ ಹೊಸದಾಗಿ ಕರೊನಾ ಸೋಂಕು ದೃಢವಾಗಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 9,05,901ಕ್ಕೆ ಏರಿಕೆಯಾಗಿದೆ. ಇಂದು 1497 ಗುಣಮುಖರಾಗಿದ್ದು, ಒಟ್ಟಾರೆ ಚೇತರಿಸಿಕೊಂಡವರ ಸಂಖ್ಯೆ 8,78,696ಕ್ಕೆ ಹೆಚ್ಚಳವಾಗಿದೆ. 15,205 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ.
24 ಗಂಟೆಗಳಲ್ಲಿ 10 ಸೋಂಕಿತರು ಸಾವನ್ನಪ್ಪಿದ್ದು ಒಟ್ಟಾರೆ ಮೃತರ ಸಂಖ್ಯೆ 11,981 ಕ್ಕೆ ಏರಿಕೆಯಾಗಿದೆ. ಪ್ರಸ್ತುತ 229 ಸೋಂಕಿತರು ತೀವ್ರ ನಿಗಾ ಘಟಕದಲ್ಲಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಿದೆ.
ಬೆಂಗಳೂರಲ್ಲಿ ಇಂದು 689 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ನಗರದಲ್ಲಿ ಪತ್ತೆಯಾದ ಒಟ್ಟಾರೆ ಪ್ರಕರಣಗಳ ಸಂಖ್ಯೆ 3,80,936ಕ್ಕೆ ಏರಿದೆ. ಇದರಲ್ಲಿ 3,66,445 ಜನರು ಚೇತರಿಸಿಕೊಂಡಿದ್ದು, 4,252 ಸೋಮಕಿತರು ಮೃತರಾಗಿದ್ದಾರೆ. 10,238 ಪ್ರಕರಣ ಸಕ್ರಿಯವಾಗಿದೆ.