

ಬೆಂಗಳೂರು: ರಾಜ್ಯದಲ್ಲಿ ಭಾನುವಾರವೊಂದೇ ದಿನ 1,321 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು, ಇದುವರೆಗಿನ ಸೋಂಕಿತರ ಒಟ್ಟು ಪ್ರಮಾಣ 8,93,006ಕ್ಕೆ ತಲುಪಿದೆ. ಮಾತ್ರವಲ್ಲ, ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಒಟ್ಟು ಸಂಖ್ಯೆ ಕೆಲವೇ ದಿನಗಳಲ್ಲಿ 9 ಲಕ್ಷಕ್ಕೆ ತಲುಪಲಿದೆ.
ಇನ್ನು ಗುಣಮುಖರ ಪೈಕಿ ಒಂದೇ ದಿನದಲ್ಲಿ 889 ಮಂದಿ ವಿವಿಧ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಕೇಂದ್ರಗಳಿಂದ ಬಿಡುಗಡೆ ಆಗಿದ್ದಾರೆ. ಈ ಮೂಲಕ ಇದುವರೆಗೂ ಗುಣವಾಗಿ ಬಿಡುಗಡೆ ಆದವರ ಸಂಖ್ಯೆ 8,55,750ಕ್ಕೆ ಏರಿಕೆಯಾಗಿದೆ.
ಅದಾಗ್ಯೂ ರಾಜ್ಯದಲ್ಲಿ 25,381 ಸಕ್ರಿಯ ಪ್ರಕರಣಗಳಿದ್ದು, ಆ ಪೈಕಿ ಗಂಭೀರ ರೋಗಲಕ್ಷಣಗಳಿರುವ 280 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಒಂದೇ ದಿನದಲ್ಲಿ 10 ಮಂದಿ ಕೋವಿಡ್ಗೆ ಬಲಿಯಾಗಿದ್ದು, ಇದುವರೆಗೆ ಕರೊನಾದಿಂದಾಗಿ ಮೃತಪಟ್ಟವರ ಸಂಖ್ಯೆ 11,856ಕ್ಕೆ ತಲುಪಿದೆ.