More

    ಕರೊನಾ ಲಸಿಕೆ ಇವರಿಗೇ ಮೊದಲು ಬೇಕಂತೆ; ಪ್ರಧಾನಿಗೆ ಪತ್ರ ಬರೆದು ಮನವಿ

    ಪಂಜಾಬ್​: ಕರೊನಾ ಲಸಿಕೆ ಪ್ರಯೋಗಗಳು ನಿರ್ಣಾಯಕ ಹಂತದಲ್ಲಿರುವ ಸಂದರ್ಭದಲ್ಲಿ ಅದರ ಸಂಗ್ರಹ ಹಾಗೂ ವಿತರಣೆ ಬಗ್ಗೆ ಕೂಡ ಎಲ್ಲೆಡೆ ಪೂರ್ವಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ ಕರೊನಾ ಲಸಿಕೆ ಲಭ್ಯವಾಗುತ್ತಿದ್ದಂತೆ ಮೊದಲಿಗೆ ನಮಗೇ ವಿತರಣೆ ಮಾಡಬೇಕು ಎಂಬ ಬೇಡಿಕೆ ಕೂಡ ಉಂಟಾಗಿದೆ.

    ಈ ಥರದ್ದೊಂದು ಬೇಡಿಕೆ ಇರುವ ಪತ್ರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆಯಲಾಗಿದ್ದು, ಲಸಿಕೆಗೆ ಸಂಬಂಧಿಸಿದಂತೆ ಒಂದಷ್ಟು ಸ್ಪಷ್ಟನೆಗಳನ್ನು ಕೂಡ ಅವರಿಂದ ಕೋರಲಾಗಿದೆ. ಅಂದಹಾಗೆ ಇಂಥದ್ದೊಂದು ಬೇಡಿಕೆಯನ್ನು ಸಲ್ಲಿಸಿರುವುದು ಪಂಜಾಬ್. ಅಲ್ಲಿನ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು, ಲಸಿಕೆ ವಿತರಣೆ ವೇಳೆ ತಮ್ಮ ರಾಜ್ಯಕ್ಕೆ ಆದ್ಯತೆ ನೀಡಬೇಕು ಎಂದು ಪ್ರಧಾನಿಗೆ ಪತ್ರ ಬರೆದು ಕೋರಿಕೊಂಡಿದ್ದಾರೆ.

    ಪಂಜಾಬ್​ನಲ್ಲಿ ಕೋವಿಡ್​ನಿಂದಾಗಿ ಸಾಯುತ್ತಿರುವವರ ಪ್ರಮಾಣ ಹೆಚ್ಚಿರುವುದರಿಂದ ಲಸಿಕೆಯ ಅಗತ್ಯ ಹೆಚ್ಚಾಗಿದೆ. ವಯಸ್ಸು ಹಾಗೂ ಕೋಮಾರ್ಬಿಡಿಟಿ ಕಾರಣಗಳಿಂದ ಹೆಚ್ಚು ಜನ ಕೋವಿಡ್​ಗೆ ಬಲಿಯಾಗುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಕೋವಿಡ್​ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ ಕರೊನಾದಿಂದಾಗುತ್ತಿರುವ ಸಾವಿನ ಸಂಖ್ಯೆ ಅಧಿಕವಿದೆ. ಹೀಗಾಗಿ ಲಸಿಕೆ ವಿತರಣೆ ವೇಳೆ ಪಂಜಾಬ್​ಗೆ ಹೆಚ್ಚಿನ ಆದ್ಯತೆ ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

    ಅಲ್ಲದೆ ಕೋವಿಡ್​ ಲಸಿಕೆಯ ಖರ್ಚನ್ನು ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಭರಿಸುತ್ತದೆಯೇ ಇಲ್ಲವೇ , ಲಸಿಕೆ ಹಾಗೂ ಲಸಿಕೆ ಪೂರೈಕೆ ಖರ್ಚು ಕೂಡ ಅದರಲ್ಲಿ ಸೇರಿರುತ್ತದೆಯೇ ಇಂಬಿತ್ಯಾದಿ ಸ್ಪಷ್ಟನೆಗಳನ್ನೂ ಅವರು ಈ ಪತ್ರದಲ್ಲಿ ಕೇಳಿದ್ದಾರೆ. (ಏಜೆನ್ಸೀಸ್​)

    ಕುಂಭ ಮೇಳದಲ್ಲಿ ಟೆಂಟ್​ ಹಾಕಿ ಟೋಪಿ ಹಾಕಿದ್ರು; ಕೋಟಿ ಲೂಟಿ ಮಾಡಿ ಸಿಕ್ಕಿಬಿದ್ರು…

    ಪತಿ ಯುವಕರಂತೆ ಕಾಣಿಸ್ತಾರೆ, ನಾನೋ ವಯಸ್ಸಾದವಳಂತೆ ಕಾಣಿಸ್ತೇನೆ- ಪರಿಹಾರ ಹೇಳಿ…

    ಇಂದು ಹಸೆಮಣೆ ಏರಬೇಕಿದ್ದ ಸರ್ಕಾರಿ ನೌಕರನ ದುರಂತ ಸಾವು: ಮದುವೆ ಮನೆಯಲ್ಲಿ ಸ್ಮಶಾನ ಮೌನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts