

ಬೆಂಗಳೂರು: ಕರೊನಾ ಸೋಂಕಿನ ಪ್ರಮಾಣ ರಾಜ್ಯದಲ್ಲಿ ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 11 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಈ ಮೂಲಕ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 523ಕ್ಕೆ ಏರಿದೆ. ಇವರ ಪೈಕಿ 207 ಜನರು ಒಟ್ಟಾರೆಯಾಗಿ ಬಿಡುಗಡೆಗೊಂಡಿದ್ದು, ನಿನ್ನೆಯಿಂದ ಇಲ್ಲಿಯವರೆಗೆ ಬಿಡುಗಡೆಗೊಂಡವರ ಸಂಖ್ಯೆ 14. ಈವರೆಗೆ ಕರೊನಾ ಸೋಂಕು 20 ಮಂದಿಯನ್ನು ಬಲಿ ಪಡೆದಿದೆ. 295 ವ್ಯಕ್ತಿಗಳ ಪೈಕಿ 288 ಮಂದಿ ಸಾಮಾನ್ಯ ವಾರ್ಡ್ಗಳಲ್ಲಿ ಹಾಗೂ ಏಳು ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲಬುರಗಿಯಲ್ಲಿಯೇ 6 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಉಳಿದಂತೆ ಬಾಗಲಕೋಟೆಯಲ್ಲಿ ಮೂರು ಪ್ರಕರಣ ಹಾಗೂ ಬೆಂಗಳೂರು ನಗರದಲ್ಲಿ 1 ಹಾಗೂ ಗದಗದಲ್ಲಿ 1 ಪ್ರಕರಣ ಪತ್ತೆಯಾಗಿದೆ.
ನಿಮ್ಮ ಜಿಲ್ಲೆಯ ವಿವರ ಇಲ್ಲಿದೆ: