ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ; ಬ್ಯಾರಿಕೇಡ್​ ಮೇಲೆ ಹತ್ತಿನಿಂತ ಕಾಂಗ್ರೆಸ್​ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು

Siddaramaia 15 Feb 20
Published on

ಬೆಂಗಳೂರು: ಬೀದರ್​ನ ಶಾಹೀನ್​ ಶಾಲೆ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದ್ದನ್ನು ವಿರೋಧಿಸಿ, ರಾಜ್ಯ ಸರ್ಕಾರ ಪೊಲೀಸ್​ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ್​ ಗುಂಡೂರಾವ್, ರಿಜ್ವಾನ್ ಆರ್ಷಾದ್​ ಮತ್ತು ಕೆ. ಸುರೇಶ್​ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕಲು ಮೆರವಣಿಗೆ ಹೊರಟ ಕಾಂಗ್ರೆಸ್ ನಾಯಕರನ್ನು ರೇಸ್​ ವ್ಯೂ ಹೋಟೆಲ್​ ಎದುರು ಪೊಲೀಸರು ತಡೆದು, ಅಲ್ಲಿ ಬ್ಯಾರಿಕೇಡ್ ಹಾಕಿದರು.

ಆದರೆ ದಿನೇಶ್ ಗುಂಡೂರಾವ್​ ಮತ್ತು ರಿಜ್ವಾನ್​ ಅರ್ಷಾದ್​ ಬ್ಯಾರಿಕೇಡ್​ ಮೇಲೆಯೇ ಹತ್ತಿನಿಂತರು. ನಿಯಂತ್ರಣ ಕಷ್ಟವಾಗುತ್ತಿದ್ದಂತೆ ಕಾಂಗ್ರೆಸ್​ ಪ್ರಮುಖ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು ಅವರನ್ನು ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net