

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಪಿ.ರವಿಕುಮಾರ್ ನೇಮಕಗೊಂಡಿದ್ದಾರೆ.
ಹಾಲಿ ಸಿಎಸ್ ಟಿ.ಎಂ. ವಿಜಯ್ ಭಾಸ್ಕರ್ ಅವರು ಗುರುವಾರ (ಡಿಸೆಂಬರ್ 31) ನಿವೃತ್ತಿ ಆಗಲಿದ್ದಾರೆ. ಹಾಗಾಗಿ ಅವರ ಸ್ಥಾನಕ್ಕೆ ರವಿಕುಮಾರ್ ಅವರನ್ನ ನೇಮಿಸಲಾಗಿದೆ.
ರವಿಕುಮಾರ್ ಅವರು 1984ನೇ ಬ್ಯಾಚ್ನ ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿ. ವಿಜಯ್ ಭಾಸ್ಕರ್ ಅವರು 2018ರಲ್ಲಿ ಸಿಎಸ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ರವಿಕುಮಾರ್ ಹೆಚ್ಚುವರಿ ಸಿಎಸ್ ಆಗಿದ್ದರು. ಇದೀಗ ಸಿಎಸ್ ಆಗಿ ನೇಮಕಗೊಂಡಿದ್ದಾರೆ.