ದೀಪಾವಳಿ ಸೇರಿದಂತೆ ನವೆಂಬರ್​ನಲ್ಲಿ 9 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವ ದಿನ ಬ್ಯಾಂಕ್​ ಇರಲ್ಲ..Bank Holidays

ದೀಪಾವಳಿ ಸೇರಿದಂತೆ ನವೆಂಬರ್​ನಲ್ಲಿ 9 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವ ದಿನ ಬ್ಯಾಂಕ್​ ಇರಲ್ಲ..Bank Holidays
Published on: 
  • ನವೆಂಬರ್​ನಲ್ಲಿ ಈ ದಿನಗಳು ಬ್ಯಾಂಕ್​​​​​​​ ಓಪನ್ ಇರೋದಿಲ್ಲ.

  • ದೀಪಾವಳಿ, ಕನಕದಾಸ ಜಯಂತಿ ಸೇರಿದಂತೆ ಸಾಲು ಸಾಲು ರಜೆ.

  • ನವೆಂವರ್​ನಲ್ಲಿ ಒಟ್ಟು 9 ದಿನ ಬ್ಯಾಂಕ್​​ಗಳು ಕಾರ್ಯ ನಿರ್ವಹಿಸಲ್ಲ.

Karnataka Bank Holidays: ನವೆಂಬರ್​​ನಲ್ಲಿ ದೀಪಾವಳಿ, ಭಾನುವಾರ, ಶನಿವಾರದ ರಜಾ ದಿನ, ಕನಕ ದಾಸ ಜಯಂತಿ ಸೇರಿದಂತೆ ಒಟ್ಟು ಒಂಬತ್ತು ದಿನ ಬ್ಯಾಂಕ್​ಗೆ ರಜೆ ಇರಲಿದೆ. ಶನಿವಾರ ಮತ್ತು ಭಾನುವಾರಕ್ಕೆ ಹೊಂದಿಕೊಂಡು ಬಂದಂತಹ ಸರ್ಕಾರಿ ರಜೆಯ ದಿನಗಳೊಂದಿಗೆ ಊರುಗಳಿಗೆ ತೆರಳಲು ಅಥವಾ ಪ್ರವಾಸಕ್ಕೆ ತೆರಳಲು ಬಯಸುವವರು ಪ್ಲ್ಯಾನ್​ ಮಾಡಿಕೊಂಡು ನಿಮ್ಮ ವೈಯಕ್ತಿಕ ಸಮಯವನ್ನು ಕೊಟ್ಟುಕೊಳ್ಳಬಹುದಾಗಿದೆ.

ನವೆಂಬರ್​ನಲ್ಲಿ ಎರಡನೇ ವಾರದಲ್ಲಿ ದೀಪಾವಳಿ ಹಬ್ಬ, ನಂತರ ಕನಕದಾಸ ಜಯಂತಿ ಇದೆರೆಡು ಸರ್ಕಾರಿ ರಜಾ ದಿನಗಳು ಇನ್ನೂ.. ಏಳು ಶನಿವಾರ ಮತ್ತು ಭಾನುವಾರ ವೀಕೆಂಡ್​ ರಜೆಗಳು ಇರಲಿವೆ. ಹೀಗಾಗಿ ನಿಮ್ಮ ಯಾವುದೇ ಬ್ಯಾಂಕ್​ ಕೆಲಸವನ್ನು ಹಬ್ಬಕ್ಕೂ ಮುನ್ನ ಪೂರ್ಣಗೊಳಿಸಿಕೊಳ್ಳಿ. ಕನಕದಾಸ ಜಯಂತಿಯಂದು ಮರೆತು ಬ್ಯಾಂಕ್​ಗೆ ತೆರಳಿ ಪೆಚ್ಚು ಮರೆಯಿಂದ ವಾಪಸ್ ಬರುವುದನ್ನು ತಪ್ಪಿಸಿಕೊಳ್ಳಿ.

Also Read
ಬ್ಯಾಂಕ್ ಖಾತೆಗೆ ಕನ್ನ ಹಾಕಲಿದೆ ಮಿಸ್ಟರ್ ರೋಬಾಟ್!ಒಟಿಪಿ ಕಳವು, ಬ್ಯಾಂಕ್ ಕರೆಗೂ ಗಾಳ; ವಂಚಕರಿಗೆ ತಂತ್ರಜ್ಞಾನವನ್ನೇ ಬಾಡಿಗೆಗೆ ನೀಡುವ ಜಾಲ ಪತ್ತೆ
ದೀಪಾವಳಿ ಸೇರಿದಂತೆ ನವೆಂಬರ್​ನಲ್ಲಿ 9 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವ ದಿನ ಬ್ಯಾಂಕ್​ ಇರಲ್ಲ..Bank Holidays

ಯಾವ್ಯಾವ ದಿನಾಂಕದಂದು ರಜೆ ಇರಲಿದೆ?

  • ನ.1: ಭಾನುವಾರ - ಕನ್ನಡ ರಾಜ್ಯೋತ್ಸವ

  • ನ.8: ಭಾನುವಾರ - ನರಕ ಚತುರ್ದ

  • ನ.9: ಸೋಮವಾರ - ಬಲಿ ಪಾಢ್ಯಮಿ

  • ನ.14: ಎರಡನೇ ಶನಿವಾರ

  • ನ.15: ಭಾನುವಾರ

  • ನ.22: ಭಾನುವಾರ

  • ನ.27: ಶುಕ್ರವಾರ- ಕನಕದಾಸ ಜಯಂತಿ

  • ನ.28: ನಾಲ್ಕನೇ ಶನಿವಾರ

  • ನ.29: ಭಾನುವಾರ

ಲಾಂಗ್​ ವೀಕೆಂಡ್, ಬಸ್ ದರ ದುಬಾರಿ

ಸಾಲು ಸಾಲು ರಜೆಗಳು ಇರುವ ಕಾರಣ ಈ ತಿಂಗಳು ಹಬ್ಬಕ್ಕೆ ಊರಿನತ್ತ ಮುಖ ಮಾಡುವವರು ಹೆಚ್ಚೆ ಇದ್ದಾರೆ. ದೀಪಾವಳಿ ಹಬ್ಬ ಆಚರಿಸಿ, ಪಟಾಕಿ ಹಚ್ಚಿ ಸಂಭ್ರಮಿಸಲು ಹಲವರು ಸುದೀರ್ಘ ರಜೆಯನ್ನು ತೆಗೆದುಕೊಳ್ಳುತ್ತಾರೆ. ಆದರೆ, ಇದನ್ನೇ ಗುರಿಯಾಗಿಸಿಕೊಂಡ ಖಾಸಗಿ ಬಸ್ ಮಾಲೀಕರು ದುಬಾರಿ ಟಿಕೆಟ್​ ವಿಧಿಸಲು ಶುರುವಿಟ್ಟುಕೊಂಡಿದ್ದಾರೆ. ಹೀಗಾಗಿ ನೀವು ಊರಿಗೆ ತೆರಳುವ ಒಂದು ಇಪ್ಪತ್ತು ದಿನಕ್ಕೂ ಮುನ್ನವೇ ಬಸ್ ಮತ್ತು ಟ್ರೈನ್​ ಟಿಕೆಟ್​ಗಳನ್ನು ಬುಕ್ ಮಾಡಿಕೊಳ್ಳುವುದು ಒಳಿತು. ನಿಮಗೆ ಬೇಕಾದಷ್ಟು ಹಣವನ್ನು ರಜೆಯ ಮುನ್ನವೇ ಡ್ರಾ ಮಾಡಿಕೊಂಡು ಬ್ಯಾಂಕ್​ ಕೆಲಸ ಸಂಪೂರ್ಣವಾಗಿ ಮುಗಿಸಿಕೊಳ್ಳುವ ಬಗ್ಗೆ ಯೋಚಿಸಿ, (ಏಜೆನ್ಸೀಸ್).