ಮಂಗಳೂರು : ದಕ್ಷಿಣ ಭಾರತದ ಮುಂಚೂಣಿಯ ಖಾಸಗಿ ವಲಯದ ಬ್ಯಾಂಕ್ ಆಗಿರುವ ಕರ್ಣಾಟಕ ಬ್ಯಾಂಕ್‌ನ ನೂತನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮತ್ತು ಸಿಇಒ ಆಗಿ ಹಿರಿಯ ಬ್ಯಾಂಕರ್ ರಾಘವೇಂದ್ರ ಎಸ್. ಭಟ್ ನೇಮಕಗೊಂಡಿದ್ದಾರೆ
ಕರ್ಣಾಟಕ ಬ್ಯಾಂಕ್‌ನಲ್ಲಿ 4 ದಶಕಗಳ ಕಾಲ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ರಾಘವೇಂದ್ರ ಎಸ್. ಭಟ್ ಅವರು
ಈ ಹಿಂದೆ ಬ್ಯಾಂಕ್‌ನಲ್ಲಿ ಸಿಒಒ ಸೇರಿದಂತೆ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಕರ್ಣಾಟಕ ಬ್ಯಾಂಕ್‌ಗೆ ರಾಘವೇಂದ್ರ ಎಸ್ ಭಟ್ ಅವರು ಎಂಡಿ ಮತ್ತು ಸಿಇಒ ಆಗಿ ನೇಮಕಗೊಂಡಿದ್ದು ಸಂತಸ ತಂದಿದೆ.
ಅವರ ಅನುಭವ ಮತ್ತು ಪರಿಣತಿಯ ಸಂಪತ್ತು ಬ್ಯಾಂಕ್‌ನ ನಿರಂತರ ಬೆಳವಣಿಗೆ ಮತ್ತು ಯಶಸ್ಸಿಗೆ ಕಾರಣವಾಗಲಿದೆ. ಬ್ಯಾಂಕ್‌ನ ಗ್ರಾಹಕರು
ಮತ್ತು ಷೇರುದಾರರಿಗೆ ಮೌಲ್ಯಯುತ ಸೇವೆ ತಲುಪಿಸುವ ನಿಟ್ಟಿನಲ್ಲಿ ಅವರೊಂದಿಗೆ ಕಾರ್ಯನಿರ್ವಹಿಸುವದನ್ನು ನಾವು ನಿರೀಕ್ಷಿಸುತ್ತೇವೆ ಎಂದು ಬ್ಯಾಂಕ್‌ನ ಅಧ್ಯಕ್ಷ ಪಿ. ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಕಾರ್ಯ ನಿರ್ವಹಿಸಲು ನನಗೆ ಹೆಮ್ಮೆಯಿದೆ. ಬ್ಯಾಂಕ್ ಒಂದು ಶತಮಾನಕ್ಕೂ ಹೆಚ್ಚು ಕಾಲ ನಂಬಿಕೆ ಮತ್ತು ಸದ್ಭಾವನೆಯನ್ನು ಹೊಂದಿದ್ದು, ಆ ಬಲವಾದ ಅಡಿಪಾಯದ ಮೇಲೆ ಮತ್ತಷ್ಟು ಬೆಳೆಸಲು ಹಾಗೂ ಎಲ್ಲ ಪಾಲುದಾರರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ರಾಘವೇಂದ್ರ ಎಸ. ಭಟ್ ತಿಳಿಸಿದ್ದಾರೆ