

ಬೆಂಗಳೂರು: ರಾಜ್ಯದಲ್ಲಿ ಇಂದು ವಿಧಾನಸಭೆಗೆ ಚುನಾವಣೆ ಭರದಿಂದ ಸಾಗುತ್ತಿದ್ದು, ಮತದಾರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ಜನಸಾಮಾನ್ಯರಂತೆ ಸೆಲೆಬ್ರಿಟಿಗಳು ಮತಚಲಾಯಿಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮೇ 10ರಂದು ನಡೆಯುತ್ತಿದ್ದು, ಸ್ಯಾಂಡಲ್ವುಡ್ ಸ್ಟಾರ್ಸ್ ಮತ ಚಲಾಯಿಸಿದ್ದಾರೆ. ಯಾರ್ಯಾರು ಬಂದು ವೋಟ್ ಮಾಡಿದ್ರು ನೋಡಿ.
ನಾವೆಲ್ಲ ವೋಟ್ ಮಾಡಿದ್ದೇವೆ. ನೀವು ಮತ ಚಲಾಯಿಸಿ ಮಾಡಿ. ವೋಟ್ ಮಾಡುವವರೆ ಡೇರ್ ಡೆವಿಲ್. ನಾನ್ ಬಿಡಿ ಡೇರ್ ಡೆವಿಲ್, ನೀವು..? ಎಂದು ಬರೆದುಕೊಂಡು ನಟ ಧನಂಜಯ್ ಕುಟುಂಬ ಸಮೇತರಾಗಿ ಮತಚಲಾಯಸಿದ ಕುಟುಂಬದ ಫೋಟೋ ಹಂಚಿಕೊಂಡಿದ್ದಾರೆ.
ನಮ್ಮ ಒಂದು ಕ್ಷಣದ ನಿರ್ಧಾರ ನಾಡಿನ ಭವಿಷ್ಯವನ್ನೇ ಬದಲಿಸಬಲ್ಲದು. ವಿವೇಚನೆಯಿಂದ ಮತ ಹಾಕೋಣ. ನಾನು ಮತ ಹಾಕಿ ಬಂದೆ. ನೀವು? ಎಂದು ನಟ ಗಣೇಶ್ ಅವರು ಫೋಟೋ ಶೇರ್ ಮಾಡಿದ್ದಾರೆ.
ಈ ಜನಾಭಿಪ್ರಾಯದ ಹಕ್ಕು, ಪ್ರಜಾಪ್ರಭುತ್ವ ನಿತ್ಯ, ನಿರಂತರ, ನೂತನವಾಗಿರಲಿ Bro…Sis…. Get up… Go… Vote… ಎಂದು ನಟ ಉಪೇಂದ್ರ ಅವರು ಫೋಟೋ ಹಂಚಿಕೊಂಡು ಮತ ಚಲಾಯಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.