ರಾಜ್ಯದ 13 ರೈಲ್ವೆ ನಿಲ್ದಾಣಗಳಿಗೆ ‘ಅಮೃತ’ ಸಿಂಚನ

Railway Station
Published on

ಬೆಂಗಳೂರು: ಅಮೃತ್ ಭಾರತ್ ರೈಲ್ವೆ ನಿಲ್ದಾಣ ಯೋಜನೆಯಡಿ 508 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ವೇದಿಕೆ ಮೂಲಕ ಭಾನುವಾರ ಚಾಲನೆ ನೀಡಿದ್ದು, ಈ ಪೈಕಿ ಕರ್ನಾಟಕದ 13 ರೈಲ್ವೆ ನಿಲ್ದಾಣಗಳು ಸೇರಿವೆ.

ಒಟ್ಟು 303.50 ಕೋಟಿ ರೂ. ವೆಚ್ಚ ಅಂದಾಜಿಸಿದ್ದು, ಹಳೆಯ ರೈಲ್ವೆ ನಿಲ್ದಾಣಗಳನ್ನು ಪುನರ್ ನಿರ್ಮಿಸಿ ಆಧುನಿಕತೆ ಸ್ಪರ್ಶ ನೀಡಬೇಕೆಂಬ ಬಹು ದಿನದ ಕನಸು ನನಸಾಗುತ್ತಿದೆ. ಕಲಬುರಗಿ ಜಿಲ್ಲೆಯ ಮೂರು ಹಾಗೂ ಬೆಳಗಾವಿ ಜಿಲ್ಲೆಯ ಎರಡು ರೈಲ್ವೆ ನಿಲ್ದಾಣಗಳು ಆಧುನೀಕರಣವಾಗುತ್ತಿವೆ.

ಮರು ಅಭಿವೃದ್ಧಿಯಾಗಲಿರುವ ನಿಲ್ದಾಣಗಳು

ಹಾಸನ ಜಿಲ್ಲೆ: ಅರಸಿಕೆರೆ, 34.10 ಕೋಟಿ ರೂ., ಕಲಬುರಗಿ ಜಿಲ್ಲೆ: ವಾಡಿ, 32.10 ಕೋ.ರೂ., ಕಲಬುರಗಿ- 29.10 ಕೋ.ರೂ., ಶಹಬಾದ್, 26.10 ಕೋ.ರೂ., ದಾವಣಗೆರೆ ಜಿಲ್ಲೆ: ಹರಿಹರ, 25.20 ಕೋ.ರೂ., ಬೀದರ್ ಜಿಲ್ಲೆ: ಬೀದರ್, 24.40 ಕೋ.ರೂ., ಗದಗ ಜಿಲ್ಲೆ: ಗದಗ, 23.20 ಕೋ.ರೂ., ಕೊಪ್ಪಳ ಜಿಲ್ಲೆ: ಕೊಪ್ಪಳ, 21.10 ಕೋ.ರೂ., ದಕ್ಷಿಣಕನ್ನಡ ಜಿಲ್ಲೆ: ಮಂಗಳೂರು, 18.50 ಕೋಟಿ ರೂ., ಬೆಳಗಾವಿ ಜಿಲ್ಲೆ: ಘಟಪ್ರಭಾ, 18.20 ಕೋ.ರೂ., ಗೋಕಾಕ್, 17 ಕೋ.ರೂ., ಧಾರವಾಡ ಜಿಲ್ಲೆ: ಅಳ್ನಾವರ್, 17.20 ಕೋ ರೂ., ಬಳ್ಳಾರಿ ಜಿಲ್ಲೆ: ಬಳ್ಳಾರಿ, 16.70 ಕೋ. ರೂ. ವೆಚ್ಚದ ಅಂದಾಜು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net