ಕಾರ್ಗಿಲ್ ವಿಜಯ ದಿವಸ್ : ಮೈಸೂರಿನಲ್ಲಿ ಬಿಜೆಪಿಯಿಂದ ಪಂಜಿನ ಮೆರವಣಿಗೆ

kargil vijay diwas 2
Published on

ಮೈಸೂರು: ಬಿಜೆಪಿ ನಗರ ಯುವ ಮೋರ್ಚಾ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಪ್ರಯುಕ್ತ ನಗರದಲ್ಲಿ ಶುಕ್ರವಾರ ಪಂಜಿನ ಮೆರವಣಿಗೆ ನಡೆಯಿತು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದಿಂದ ಶಿವರಾಮಪೇಟೆವರೆಗೆ ಪಂಜಿನ ಮೆರವಣಿಗೆ ನಡೆಸಲಾಯಿತು. ಕಾರ್ಯಪ್ಪ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಮಾತನಾಡಿ, ದೇಶದ 140 ಕೋಟಿ ಜನರು ನೆಮ್ಮದಿಯಿಂದ ಇರಲು ನಮ್ಮ ಯೋಧರು ಕಾರಣ. ಗಾಳಿ, ಮಳೆ, ಚಳಿಯನ್ನು ಲೆಕ್ಕಿಸದೆ ಯೋಧರು ಗಡಿ ಕಾಯುತ್ತಿರುವ ಪರಿಣಾಮ ದೇಶದ ಜನರು ನೆಮ್ಮದಿಯ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಹಲವಾರು ಯೋಧರು ವೀರ ಮರಣ ಹೊಂದುವ ಮೂಲಕ ದೇಶವನ್ನು ರಕ್ಷಿಸುವ ಕಾರ್ಯ ಮಾಡಿದರು. ಅವರ ತ್ಯಾಗ್ಯವನ್ನು ನಾವೆಲ್ಲರು ಸ್ಮರಿಸಬೇಕು ಎಂದರು.

ಯುವ ಮೋರ್ಚಾ ನಗರಾಧ್ಯಕ್ಷ ರಾಕೇಶ್ ಗೌಡ, ರಾಜ್ಯ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಡಾ.ಅನಿಲ್ ಥಾಮಸ್, ಪಕ್ಷದ ಮುಖಂಡರಾದ ಗಿರಿಧರ್, ಜೋಗಿ ಮಂಜು, ರುದ್ರಮೂರ್ತಿ, ದಿನೇಶ್ ಗೌಡ, ಸಚಿನ್, ಲೋಹಿತ್, ಮಧು ಮೋಹನ್, ನವೀನ ರಾಜ್, ಪ್ರಣಯ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net