ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಮ್ಯಾರಥಾನ್

31NGD8
Published on

ನಂಜನಗೂಡು: ಕಾರ್ಗಿಲ್ ಯುದ್ಧ ಗೆದ್ದು 25 ವರ್ಷ ತುಂಬಿದ್ದ ಹಿನ್ನೆಲೆಯಲ್ಲಿ ವಿಜಯೋತ್ಸವದ ಅಂಗವಾಗಿ ಯುವ ಬ್ರಿಗೇಡ್ ವತಿಯಿಂದ ಬುಧವಾರ ಕಾರ್ಗಿಲ್ ಬೆಟ್ಟದಲ್ಲಿ ಹಾರಡಿದ ತ್ರಿವರ್ಣ ಧ್ವಜದೊಂದಿಗೆ ಟಾರ್ಗೆಟ್ ಪಿಒಕೆ ಅಭಿಯಾನದಡಿ ನಗರದಲ್ಲಿ ಮ್ಯಾರಥಾನ್ ಓಟ ನಡೆಯಿತು.


ನಗರದ ಚಿಂತಾಮಣಿ ಗಣಪತಿ ದೇವಾಲಯದ ಮುಂಭಾಗ ಸಮಾವೇಶಗೊಂಡ ಬಳಿಕ ಓಟಕ್ಕೆ ನಿವೃತ್ತ ಯೋಧ ಹರಿನಾಯರ್, ಉಗ್ರಂ ಗಿರೀಶ್ ಕಾರ್ಗಿಲ್ ಬೆಟ್ಟದಲ್ಲಿ ಹಾರಡಿದ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಚಾಲನೆ ನೀಡಿದರು.


250 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿದ್ದ ರಾಷ್ಟ್ರಭಕ್ತರ ದಂಡು ಶೀಘ್ರವಾಗಿ ಪಿಒಕೆ ಭಾರತದ ವಶಕ್ಕೆ ಬರುವಂತಾಗಲಿ ಎಂಬ ಸಂಕಲ್ಪದೊಂದಿಗೆ ತೆರೆದ ಜೀಪ್‌ನಲ್ಲಿ ಸಾಗುತ್ತಿದ್ದ ಕಾರ್ಗಿಲ್‌ನ ಬೆಟ್ಟದಲ್ಲಿ ಹಾರಡಿದ ರಾಷ್ಟ್ರಧ್ವಜವನ್ನು ಹಿಂಬಾಲಿಸುತ್ತಾ ಓಟದಲ್ಲಿ ಪಾಲ್ಗೊಂಡರು. ರಾಷ್ಟ್ರಪತಿ ರಸ್ತೆಯ ಉದ್ದಕ್ಕೂ ಭಾರತ ಮಾತೆಗೆ, ಹುತಾತ್ಮ ಯೋಧರಿಗೆ ಜೈಕಾರ ಹಾಕುತ್ತ ಓಟ ಆರಂಭಿಸಿದ ಯುವಕರು ಶ್ರೀಕಂಠೇಶ್ವರಸ್ವಾಮಿ ದೇವಾಲಯ ತಲುಪಿದರು.


ನಂತರ ಯುವ ಬ್ರಿಗೇಡ್ ಸಂಘಟಕ ಎಸ್.ಚಂದ್ರಶೇಖರ್ ಮಾತನಾಡಿ, ಭಾರತ ಇಂದು ರಕ್ಷಣಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಭಾರತ ವಿಶ್ವದ ಮುಂಚೂಣಿ ದೇಶವಾಗಿ ಹೊರಹೊಮ್ಮುತ್ತಿರುವ ಪರಿ ನೋಡಿದರೆ ಪಿಒಕೆ ಭಾರತದ ಭಾಗವಾಗ ಬೇಕೆಂಬ ನಮ್ಮ ಇಂದಿನ ಸಂಕಲ್ಪ ಸಧ್ಯದಲ್ಲೇ ಈಡೇರುವಂತೆ ಕಾಣುತ್ತಿದೆ ಎಂದರು.


ಬಳಿಕ ಮಾತನಾಡಿದ ಮಾಜಿ ಸೈನಿಕ ಹರಿನಾಯರ್ ಕಾರ್ಗಿಲ್ ಹೋರಾಟದ ಕುರಿತು ಯುವಕರಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ನಿತಿನ್, ನಂಜನಗೂಡು ತಾಲೂಕು ಸಂಚಾಲಕ ಚಂದನ್, ಜಿಲ್ಲಾ ಸಹ ಸಂಚಾಲಕ ಎನ್.ಜೆ.ಸುನಿಲ್, ಗಿರೀಶ್, ಅರ್ಜುನ್, ಕಿಶೋರ್, ಮಹದೇವ, ಸತೀಶ್, ಸೂರಿ, ರವಿಶಾಸ್ತ್ರಿ, ಶ್ರೀಕಾಂತ್, ರವಿ, ರಂಗಸ್ವಾಮಿ, ಯಶಸ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net