ಕರೀನಾ ಕಪೂರ್ ಪಾಲಿಸುವ ಧರ್ಮ ಯಾವುದು ಗೊತ್ತಾ? ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ಮನೆ ಕೆಲಸದ ಮಹಿಳೆ..

Kareena Kapoor - Final
Published on

ಮುಂಬೈ: ಸೆಲೆಬ್ರೆಟಿ ಕಪಲ್ ಆಗಿರುವ ಕಾರಣದಿಂದ​​ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಮಗ ತೈಮೂರ್ ಅಲಿ ಖಾನ್ ಬಾಲ್ಯದಲ್ಲಿಯೇ ಅಪಾರ ಜನಪ್ರಿಯತೆ ಗಳಿಸಿದ್ದಾನೆ. ಸ್ಟಾರ್​ಕಿಡ್ ಆಗಿರುವುದರಿಂದ ತೈಮೂರ್​ನ ಬಾಲ್ಯದ ಕ್ಯೂಟ್ ಕ್ಷಣಗಳು ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗುತ್ತಿತ್ತು. ಸೈಫ್ ಅಲಿ ಖಾನ್, ಕರೀನಾ ಬೇರೆ ಬೇರೆ ಧರ್ಮದವರಾದ ಕಾರಣ ಮನೆಯಲ್ಲಿ ಕರೀನಾ ಮತ್ತು ತೈಮೂರ್ ಯಾವ ಧರ್ಮ ಪಾಲಿಸುತ್ತಾರೆ ಎನ್ನುವ ಕುತೂಹಲವೂ ಬಹಳಷ್ಟು ಜನರಿಗಿತ್ತು. ಇದೀಗ ತೈಮೂರ್ ಅನ್ನು ಬಾಲ್ಯದಲ್ಲಿ ನೋಡಿಕೊಂಡಿದ್ದ ದಾದಿ ಈ ಕುರಿತು ಮಾತನಾಡಿದ್ದಾರೆ.

ಕರೀನಾ ಕಪೂರ್ ಹೆರಿಗೆಯ ನಂತರ ತೈಮೂರ್​ಅನ್ನು ನೋಡಿಕೊಂಡ ದಾದಿ ಲಲಿತಾ ಡಿಸಿಲ್ವಾ. ಅವರು ತೈಮೂರ್​ನ ಪಾಲನೆ ಪೋಷಣೆಗಾಗಿ ಸೈಫ್ ಅಲಿ ಖಾನ್ ಮನೆಯಲ್ಲಿಯೆ ಉಳಿದುಕೊಂಡಿದ್ದರು. ಆಗಾಗ ತೈಮೂರ್ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಅವರ ಸಂಬಳದ ಕುರಿತಾಗಿ ಆ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಬಾರಿ ಚರ್ಚೆ ನಡೆದು ಮೀಮ್ಸ್​ಗಳು ಹರಿದಾಡಿತ್ತು.  ತೈಮೂರ್​ನನ್ನು ನೋಡಿಕೊಳ್ಳುವ ಕೆಲಸಕ್ಕೆ ಸೇರಲು ಬಯಸುವುದಾಗಿ ತಮಾಷೆಯಾಗಿ ಕಮೆಂಟ್​ಗಳನ್ನು ಮಾಡಿದ್ದರು.

ಅದಾಗಿ ಹಲವು ವರ್ಷಗಳ ನಂತರ ಲಲಿತಾ ಡಿಸಿಲ್ವಾ ಕರೀನಾ ಕಪೂರ್ ಮನೆಯಲ್ಲಿನ ತಮ್ಮ ಅನುಭವಗಳನ್ನು ಸಂದರ್ಶನವೊಂದರಲ್ಲಿ ಹಂಚಿಕೊಳ್ಳುವಾಗ ಕರೀನಾ ಕಪೂರ್ ಪಾಲಿಸುತ್ತಿರುವ ಧರ್ಮದ ಕುರಿತಾಗಿ ಹೇಳಿಕೊಂಡಿದ್ದಾರೆ.

ಕರೀನಾ ಕಪೂರ್ ತನ್ನ ತಾಯಿ ಬಬಿತಾ ಅವರಂತೆ ಕ್ರೈಸ್ತ ಧರ್ಮ ಪಾಲಿಸುತ್ತಿದ್ದಾರೆ. ಕರೀನಾ ತನ್ನ ಮಕ್ಕಳ ಬಗ್ಗೆ ತುಂಬಾ ಕೇರಿಂಗ್ ಹಾಗೂ ಶಿಸ್ತು ಪಾಲಿಸುತ್ತಾಳೆ. ತನ್ನಲ್ಲಿ ಹಲವು ಬಾರಿ ಮಕ್ಕಳಿಗಾಗಿ ದೇವರ ಪ್ರಾರ್ಥನೆ ಇಡಲು ಹೇಳಿದ್ದಾಳೆ. ಕ್ರೈಸ್ತ ಧರ್ಮ, ಪಂಜಾಬಿ ಪ್ರಾರ್ಥನೆಗಳನ್ನು ಕರೀನಾ ಆಗಾಗೆ ಕೇಳಿಸಿಕೊಳ್ಳುತ್ತಿದ್ದಳು. ಈ ಗುಣಗಳು ತಾಯಿ ಬಬಿತಾಳಿಂದ ಬಂದಿದೆ. ಕರೀನಾಳ ಬಾಲ್ಯವನ್ನು ನಾನು ನೋಡಿಲ್ಲವಾದರೂ ಅದರ ಬಗ್ಗೆ ಕೇಳಿ ತಿಳಿದುಕೊಂಡಿದ್ದೇನೆ ಎಂದಿದ್ದಾರೆ.

ಕರೀನಾ ಕಪೂರ್ ಬಾಲ್ಯದಲ್ಲಿ ತಾಯಿ ಬಬಿತಾ ಬಹಳಷ್ಟು ಶಿಸ್ತು ಪಾಲಿಸುತ್ತಿದ್ದರಂತೆ. ಕರೀನಾ ವಿದ್ಯಾಭ್ಯಾಸ ಮತ್ತು ಬೆಳವಣಿಗೆಯ ಕುರಿತು ಅವರು  ಹೆಚ್ಚಿನ ಕಾಳಜಿ ವಹಿಸಿದ್ದರು. ಅದೇ ಗುಣಗಳನ್ನು ನಾವೀಗ ಕರೀನಾಳಲ್ಲಿ ಕಾಣಬಹುದು ಎಂದು ಲಲಿತಾ ಹೇಳಿಕೊಂಡಿದ್ದಾರೆ.

ಇನ್ನು ಸೈಫ್ ಅಲಿ ಖಾನ್ ಮನೆಯ ವಾತಾವರಣದ ಬಗ್ಗೆ ಮಾತನಾಡಿರುವ ಅವರು, ಅಲ್ಲಿ ನಾವೆಲ್ಲ ಒಂದೇ ರೀತಿಯ ಆಹಾರ ಸೇವಿಸುತ್ತಿದ್ದೆವು. ಕೆಲಸದವರನ್ನೂ ಕೂಡ ಅವರು ಮನೆಯವರಂತೆ ನೋಡಿಕೊಳ್ಳುತ್ತಿದ್ದರು. ಕೆಲವೊಮ್ಮೆ ನಾವು ಒಟ್ಟಿಗೆ ಒಂದೇ ಟೇಬಲ್ ಮೇಲೆ ಉಪಹಾರ ಸೇವಿಸಿದ್ದೆವು ಎಂದು ಸೈಫ್ ದಂಪತಿ ಸರಳತೆಯನ್ನು ಲಲಿತಾ  ಹೋಗಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net