ಕರೀನಾ ಕಪೂರ್​​ ಹಾಟ್​​​ ಫೋಟೋಶೂಟ್​​; ಬೇಬೊ ಯಾವತ್ತಿದ್ದರೂ ಟೈಮ್​ಲೆಸ್​​​ ಬ್ಯೂಟಿ ಎಂದ ನೆಟ್ಟಿಗರು..!

kareeemixfinakl
Published on

ಫ್ಯಾಶನ್ ಡಿಸೈನರ್ ಮಸಾಬ ಗುಪ್ತಾ ಮದುವೆಗಾಗಿ ಡಿಸೈನರ್​​​ ಔಟ್​​​ಫಿಟ್​​ ಮಾಡೋದ್ರಲ್ಲಿ ತುಂಬಾನೇ ಫೇಮಸ್​​. ಮಸಾಬಾ ಇದೀಗ ತನ್ನದೇ ಆದ ಬ್ರ್ಯಾಂಡನ್ನೇ ಸೃಷ್ಟಿಸಿಕೊಂಡಿದೆ. ಮಸಾಬ ಆಫಿಶಿಯಲ್​​ ಬ್ರೈಡಲ್​ ಕಲೆಕ್ಷನ್​ ಪೇಜ್​ನಲ್ಲಿ ಇದೀಗ ಕರೀನಾ ಕಪೂರ್​​​ ಮಾಡರ್ನ್​ ಮತ್ತು ಸಾಂಪ್ರದಾಯಿಕ ಔಟ್​​ಫಿಟ್​​​ನ ಫೋಟೋಶೂಟ್​​​ ನಡೆಸಿದ ಫೋಟೋಗಳನ್ನ ಹಂಚಿಕೊಳ್ಳಲಾಗಿದೆ.

ಕರೀನಾ ಕಪೂರ್​​​​ ಎರಡೂ ಔಟ್​​​ಫಿಟ್​​​​​ನಲ್ಲಿ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಬಾಲಿವುಡ್​ ಬೇಬೊ ಫೋಟೋಗೆ ನೆಟ್ಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಬೇಬೊ ಸೀರೆ, ಲೆಹಂಗಾ, ಜಮ್​ಸ್ಯೂಟ್​​​, ಇಂಡಿಯನ್​ ಲುಕ್​, ಬ್ರೈಡಲ್​ ಲುಕ್​ನಲ್ಲಿ ಮಿಂಚಿದ್ದಾರೆ. ಕರೀನಾ ಕಪೂರ್​​ ತಮ್ಮೆಲ್ಲಾ ಫೋಟೋಗಳಲ್ಲಿ ಬೇರೆ ಬೇರೆ ರೀತಿಯ ಮೇಕಪ್​ ಮಾಡಿಕೊಂಡಿದ್ದು, ನ್ಯಡ್​, ರೆಡ್​​​​, ಹೀಗೆ ಕಾಸ್ಟ್ಯೂಮ್​ಗೆ ಸರಿ ಹೊಂದುವಂತಹ ಲಿಪ್ಸ್​​​ಟಿಕ್​​​​ ಹಚ್ಚಿದ್ದಾರೆ.

ಸದ್ಯ ಕರೀನಾ ಅಭಿಮಾನಿಗಳು ಬೇಬೋ ಅನ್ನ ಟೈಮ್​ಲೆಸ್​​ ಬ್ಯೂಟಿ, ಎವರ್ಗ್ರೀನ್​ ಬ್ಯೂಟಿ ಅಂತೆಲ್ಲಾ ಕರೆದಿದ್ದಾರೆ.
ಒಂದು ಸಿನಿಮಾ ಸಕ್ಸಸ್ ಆಗಬೇಕೆಂದರೆ ಅಲ್ಲಿ ಹೀರೋ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಹೀರೋಯಿನ್ ಕೂಡ ಆಗಿರುತ್ತಾರೆ.

ಭಾರತೀಯ ಸಿನಿರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸಮುಖಗಳೇ ಹೆಚ್ಚು ಕಾಣುತ್ತಿದೆ. ಆದರೆ ಹಿಂದೊಮ್ಮೆ ಕೆಲವೇ ಕೆಲವು ನಟಿಯರು ಸಿನಿರಂಗದಲ್ಲಿದ್ದರು, ಅವರ ಸಿನಿಮಾಗಳೇ ಬಾಕ್ಸ್ ಆಫೀಸ್’ನಲ್ಲಿ ಸದ್ದು ಮಾಡುತ್ತಿತ್ತು. ಅದರಲ್ಲಿ ಕರೀನಾ ಕಪೂರ್​​​ ಕೂಡಾ ನಂ.. 1 ನಟಿ ಎನಿಸಿಕೊಂಡವರು.

ಬಾಲಿವುಡ್ ಸ್ಟಾರ್ ನಟಿ ಬೇಬೋ ಕರೀನಾ ಕಪೂರ್ ಸುಮಾರು 23 ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ಈಕೆ ಯಾವ ಹೀರೋಗೂ ಕಮ್ಮಿಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಕರೀನಾ 23 ಯಶಸ್ವಿ ಸಿನಿಮಾಗಳಲ್ಲಿ ನಟಿಸಿದ್ದು, ಅತ್ಯಂತ ಯಶಸ್ವಿ ಆಧುನಿಕ ಕಾಲದ ಬಾಲಿವುಡ್ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದೀಗ ಮಸಾಬಾ ಬ್ರ್ಯಾಂಡ್​​​ಗಾಗಿ ನಡೆಸಿರುವ ಎಲ್ಲಾ ರೀತಿಯ ಫೋಟೋಶೂಟ್​​ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಕರೀನಾ ಕಪೂರ್ ಭಜರಂಗಿ ಬಾಯಿಜಾನ್, 3 ಈಡಿಯಟ್ಸ್‌, ಕಭಿ ಖುಷಿ ಕಭಿ ಗಮ್, ಜಬ್ ವಿ ಮೆಟ್ ಹೀಗೆ ಹಲವಾರು ಹಿಟ್‌ಮತ್ತು ಬ್ಲಾಕ್‌ ಬಸ್ಟರ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಎಲ್ಲಾ ಸಿನಿಮಾಗಳು ಆಕೆಗೆ ವಿಶ್ವಾದ್ಯಂತ 4000 ಕೋಟಿ ರೂ. ತಂದುಕೊಟ್ಟಿದೆ.

ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ ಮತ್ತು ದೀಪಿಕಾ ಪಡುಕೋಣೆಗಿಂತ ಬಾಲಿವುಡ್ ಸಂಭಾವನೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಕರೀನಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net