ಮಗುವಿನ ಪ್ರಾಣ ಉಳಿಸಲು ಹೋದ ಡಿವೈಎಸ್ಪಿ​ ಕಾರು ಅಪಘಾತ!

accident
Published on

ಉತ್ತರಕನ್ನಡ: ಡಿವೈಎಸ್ಪಿ ಸಂಚರಿಸುತ್ತಿದ್ದ ಕಾರು ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಅಪಘಾತಕ್ಕೀಡಾಗಿದ್ದು, ಡಿವೈಎಸ್ಪಿ ಸೇರಿ ಐವರು ಗಾಯಗೊಂಡಿದ್ದಾರೆ.

ಕಾರವಾರ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಸೋಮವಾರ ಬೆಳಗ್ಗೆ ಕಾರವಾರದಿಂದ ಮುಂಡಗೋಡಿಗೆ ಕಾರಿನಲ್ಲಿ ತೆರಳುತ್ತಿದ್ದರು. ಅರಬೈಲ್ ಘಟ್ಟದ ಬಳಿ ರಸ್ತೆಯಲ್ಲಿ ವಾಹನಕ್ಕೆ ಮಗುವೊಂದು ಅಡ್ಡ ಬಂದಿದ್ದು, ಆ ಮಗುವಿಗೆ ಕಾರು ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಹೋಗಿ ವಾಹನ ನಿಯಂತ್ರಣ ತಪ್ಪಿದೆ. ಈ ವೇಳೆ ಓಮ್ನಿ ಕಾರು ಮತ್ತು ಡಿವೈಎಸ್ಪಿ ಕಾರುಗಳು ಅಪಘಾತಕ್ಕೀಡಾಗಿವೆ.

ಅಪಘಾತದಲ್ಲಿ ಡಿವೈಎಸ್ಪಿಗೆ ಗಾಯವಾಗಿದ್ದು, ಪ್ರಣಾಪಾಯದಿಂದ ಪಾರಾಗಿದ್ದಾರೆ. ಓಮ್ನಿಯಲ್ಲಿದ್ದ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಯಲ್ಲಾಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net