ಫಸಲು ಸಮೃದ್ಧಿಯಾಗಿ ಬೆಳೆಯಲಿ

Karatagi padayatre
ಕಾರಟಗಿಯಿಂದ ಪಂಡರಾಪುರ ಪಾಂಡುರಂಗ ಸನ್ನಿಧಿಗೆ ಪಾಂಡುರಂಗ ಭಕ್ತಾಧಿಗಳು ಪಾದಯಾತ್ರೆ ಕೈಗೊಂಡರು. ಟ್ರಸ್ಟ್ ಅಧ್ಯಕ್ಷ ಶಂಕರಪ್ಪ ಮೇಗೂರು, ಪ್ರಮುಖರಾದ ವಿರೂಪಾಕ್ಷಿ ಸಜ್ಜಿಹೋಲ, ಯಮನಪ್ಪ ನೆರೆರಾ, ರಾಮಣ್ಣ, ವಿರುಪಾಕ್ಷಪ್ಪ, ಸಕ್ರಗೌಡ, ಮಂಜುನಾಥ, ಮುದಿಯಪ್ಪ, ಭೀಮಸಿಂಗ್ ಇನ್ನಿತರರಿದ್ದರು.
Published on

ಕಾರಟಗಿ: ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿ ಪಾಂಡುರಂಗ, ಲಕ್ಷ್ಮೀವೆಂಕಟೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ಸುಕ್ಷೇತ್ರ ಪಂಡರಾಪುರಕ್ಕೆ ರುಕ್ಮಿಣಿ ಸೇವಾ ಟ್ರಸ್ಟ್‌ನಿಂದ ಶನಿವಾರ ಎರಡನೇ ವರ್ಷದ ಪಾದಯಾತ್ರೆ ಕೈಗೊಳ್ಳಲಾಯಿತು.

ಟ್ರಸ್ಟ್ ಅಧ್ಯಕ್ಷ ಶಂಕರಪ್ಪ ಮೇಗೂರು ಮಾತನಾಡಿ, ಅನ್ನ ನೀಡುವ ರೈತರ ಬದುಕು ಬೆಳಕಾಗಲಿ ಹಾಗೂ ದೇಶದ ಜನ ಸುಭಿಕ್ಷೆಯಿಂದ ಬಾಳಲಿ ಎಂಬ ಸಂಕಲ್ಪದಿಂದ ಪಂಡರಾಪುರದ ಪಾಂಡುರಂಗ ದೇವಸ್ಥಾನಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಸಕಾಲಕ್ಕೆ ಮಳೆಯಾಗಿ ರೈತ ಉತ್ತಮ ಬೆಳೆ ಬೆಳೆಯಬೇಕು. ಪ್ರಜೆಗಳು ಸುರಕ್ಷತೆಯಿಂದ ಇರಬೇಕೆಂದು ಹಾಗೂ ಇಷ್ಟಾರ್ಥ ಈಡೇರಿಕೆಗೆ ಪ್ರಾರ್ಥಿಸಲಾಗುವುದು. 60ಕ್ಕೂ ಹೆಚ್ಚು ಭಕ್ತಾದಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.

ಪ್ರಮುಖರಾದ ವಿರೂಪಾಕ್ಷಿ ಸಜ್ಜಿಹೋಲ, ಯಮನಪ್ಪ ನೆರೆರಾ, ರಾಮಣ್ಣ, ವಿರುಪಾಕ್ಷಪ್ಪ, ಸಕ್ರಗೌಡ, ಮಂಜುನಾಥ, ಮುದಿಯಪ್ಪ, ಭೀಮಸಿಂಗ್, ಸಣ್ಣ ಮೂಕಪ್ಪ, ವೆಂಕಟೇಶ್ ಮರಾಠಿ, ಹೂವಣ್ಣ, ಕಾಳಪ್ಪ, ರಾಘವೇಂದ್ರ ಸಂಗಟಿ, ಶಂಕರಪ್ಪ, ಗವಿಸಿದ್ದಪ್ಪ, ನಾಗೇಶ, ಲಕ್ಷ್ಮೀ, ಗೌರಮ್ಮ ಮೇಗೂರು, ರೇಣುಕಮ್ಮ, ಗಂಗಮ್ಮ, ಪವಿತ್ರ, ನರಸಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net