

ಚಿಮ್ಮಡ: ರೈತರ ಹಬ್ಬವಾದ ಕಾರಹುಣ್ಣಿಮೆ ನಿಮಿತ್ತ ಗ್ರಾಮದಲ್ಲಿ ಕರಿ ಹರಿಯುವ ಸಂಭ್ರಮ ಮನೆ ಮಾಡಿತ್ತು.
ಗ್ರಾಮದ ಪ್ರಮುಖ ಬೀದಿಯಲ್ಲಿ ಬುಧವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಕರಿ ಹರಿಯುವ ಸ್ಪರ್ಧೆಯಲ್ಲಿ ಕೆಂಪು ಎತ್ತು ಹಾಗೂ ಬಿಳಿ ಎತ್ತುಗಳನ್ನು ಸ್ಪರ್ಧೆಗೆ ಅಣಿಗೊಳಿಸಲಾಗಿತ್ತು. ಗ್ರಾಮದ ಪ್ರಮುಖರು ತೆಂಗಿನಕಾಯಿ ಒಡೆಯುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಬಿಳಿ ಎತ್ತು ಕರಿ ಹರಿಯಿತು.
ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಬಿ.ಎಸ್. ಪಾಟೀಲ, ಆರ್.ಎಂ. ಬಗನಾಳ, ಅಣ್ಣಪ್ಪಗೌಡ ಪಾಟೀಲ, ಪುಂಡಲಿಕಪ್ಪ್ಪ ಪೂಜಾರಿ, ಬಾಳಪ್ಪಾ ಹಳಿಂಗಳಿ, ಗ್ರಾಪಂ ಮಾಜಿ ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ, ಅಶೋಕ ಧಡೂತಿ, ದುಂಡಪ್ಪ್ಪ ಪಾಟೀಲ ಇದ್ದರು.