ಕಪಾಲ ಕಪಾಲ ಎಂಬ ಸಂಸ್ಕೃತ ಪದದ ಅರ್ಥ ‘ತಲೆಬುರುಡೆ’, ಹಣೆ ಅಥವಾ ‘ಮೆದುಳಿನ ಮುಂಭಾಗ’, ‘ಭಾತಿ’ ಎಂದರೆ ‘ಬೆಳಕು’ ತೇಜಸ್ಸು, ಉಜ್ವಲ, ಗ್ರಹಿಕೆ, ಅರಿವು ಅಥವಾ ಜ್ಞಾನ ಎಂಬರ್ಥಗಳೂ ಇವೆ. ಕಪಾಲ ಭಾತಿಯೂ ಸಹ ಷಟ್ಕರ್ಮಗಳ ಒಂದು ವಿಧಾನವಾಗಿದೆ. ಕಪಾಲಭಾತಿ ಎಂದರೆ ಮಿದುಳಿನ ಮುಂಭಾಗಗಳಲ್ಲಿ ಬೆಳಕಿನ ಸ್ಥಿತಿ ಅಥವಾ ಸ್ಪಷ್ಟತೆ ಯನ್ನು ಉಂಟುಮಾಡುವಂಥ ಒಂದು ಅಭ್ಯಾಸ. ಈ ಅಭ್ಯಾಸದ ಇನ್ನೊಂದು ಹೆಸರು ಕಪಾಲಶೋಧನ. ‘ಶೋಧನ’ ಎಂದರೆ ಶುದ್ಧೀಕ ರಿಸು ಎಂದರ್ಥ. ಇದು ಪ್ರಾಣಾಯಾಮದಂತೆಯೇ ಇರುವುದು. ಭಸ್ತ್ರಿಕಾ ದಂತೆ ಇರುವುದಾದರೂ, ಇದೊಂದು ಷಟ್ಕರ್ಮ ಕ್ರಿಯೆಯಾಗಿದೆ.