ಆರು ಭಾಷೆಗಳ ನಂತರ ಈಗ ಏಳನೆಯ ಭಾಷೆಯಲ್ಲಿ 'ಕಾಂತಾರ' ಬಿಡುಗಡೆ …

Kantara - Tulu
Published on

ಬೆಂಗಳೂರು: ರಿಷಬ್​ ಶೆಟ್ಟಿ ಅಭಿನಯದ "ಕಾಂತಾರ' ಚಿತ್ರವು ಕನ್ನಡದಲ್ಲಿ ಬಿಡುಗಡೆಯಾಗಿ ಕೆಲವು ದಿನಗಳ ಅಂತರದಲ್ಲೇ ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ತುಳು ಭಾಷೆಗಳಿಗೆ ಡಬ್​ ಆಗಿರುವ ವಿಷಯ ಗೊತ್ತಿದ್ದೇ. ಈಗ ಚಿತ್ರವು ಇನ್ನೊಂದು ಭಾಷೆಗೆ ಡಬ್​ ಆಗಿ, ಬಿಡುಗಡೆಯಾಗಿದೆ.

ಹೌದು, 'ಕಾಂತಾರ' ಚಿತ್ರವು ಇದೀಗ ಸದ್ದಿಲ್ಲದೆ ಇಂಗ್ಲೀಷ್ ಭಾಷೆಗೆ ಬಿಡುಗಡೆಯಾಗಿದೆ. ಅಷ್ಟೇ ಅಲ್ಲ, ನೆಟ್​ಫ್ಲಿಕ್ಸ್​ನಲ್ಲಿ ಶನಿವಾರ ಬಿಡುಗಡೆಯಾಗಿದೆ. ಇದಕ್ಕೂ ಮೊದಲು "ಕಾಂತಾರ' ಚಿತ್ರದ ಇಂಗ್ಲೀಷ್​ ಅವತರಣಿಕೆ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಫೆ. 10ಕ್ಕೆ ಈ ಚಿತ್ರ ಬಿಡುಗಡೆಯಾಗಿದೆ.

ಈ ಮೊದಲು 'ಕಾಂತಾರ'ದ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಅವತರಣಿಕೆಗಳು ಅಮೇಜಾನ್​ ಪ್ರೈಮ್​ನಲ್ಲಿ ಲಭ್ಯವಿತ್ತು. ಹಿಂದಿ ಅವತರಣಿಕೆ ಮಾತ್ರ ನೆಟ್​ಫ್ಲಿಕ್ಸ್​ನಲ್ಲಿ ಸಿಗುತ್ತಿತ್ತು. ಈಗ ಹಿಂದಿಯ ಜತೆಗೆ ಇಂಗ್ಲೀಷ್​ ಅವತರಣಿಕೆ ಸಹ ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಮ್​ ಆಗುತ್ತಿದೆ.

'ಕಾಂತಾರ' ಚಿತ್ರವನ್ನು ಹೊಂಬಾಳೆ ಫಿಲಂಸ್​ನ ವಿಜಯ್​ ಕಿರಗಂದೂರು ನಿರ್ಮಿಸಿದ್ದು, ರಿಷಭ್​ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್​, ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್​ ಮುಂತಾದವರು ಅಭಿನಯಿಸಿದ್ದು, ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net