ರಂಗೋಲಿಯಲ್ಲಿ ಮೂಡಿದ ಕಾಂತಾರ; ಕಲಾವಿದೆಯ ಕೈಚಳಕಕ್ಕೆ ಮೆಚ್ಚುಗೆ...

Kanthara Art
Published on

ಬೆಳಗಾವಿ: ದೇಶದಾದ್ಯಂತ ಕಾಂತಾರ ಸಿನಿಮಾ ಸದ್ದು ಮಾಡುತ್ತಿದೆ. ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಸಿನಿಮಾ ಬಿಡುಗಡೆಯಾಗಿ ಎರಡು ಆವರಗಳು ಕಳೆದರೂ, ಹೌಸ್​ಫುಲ್ ಪ್ರದರ್ಶನ ಮಾತ್ರ ನಿಂತಿಲ್ಲ. ಜನ ಕುಟುಂಬ ಸಮೇತರಾಗಿ ಚಿತ್ರ ಮಂದಿರಕ್ಕೆ ತೆರಳುತ್ತಿದ್ದಾರೆ.

ಇದೀಗ ಬೆಳಗಾವಿಯ ಕಲಾವಿದೆಯೊಬ್ಬರು ಬಿಡಿಸಿದ ರಂಗೋಲಿಯ​ ಮೂಲಕ ಕಾಂತಾರ ಅರಳಿದೆ. ನಟ ರಿಷಬ್ ಶೆಟ್ಟಿಯಿರುವ ಕಾಂತಾರ ಸಿನಿಮಾದ ಪೋಸ್ಟರನ್ನು ರಂಗೋಲಿಯಲ್ಲಿ ಚಿತ್ರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ರಂಗೋಲಿ ಸ್ಪರ್ಧೆ ಆಯೋಜನೆ ಮಾಡಿದ್ದರು. ಈ ಸ್ಪರ್ಧೆಯಲ್ಲಿ ಮಜಗಾವಿಯ ಕಲ್ಲೇಶ್ವರ ನಗರದ ರುಕ್ಮಿಣಿ ಅಲವಾಡಕರ್ ಎಂಬ ಕಲಾವಿದೆ 4x4 ಅಳತೆಯಲ್ಲಿ ರಂಗೋಲಿ ಬಿಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net