- ನಮ್ಮ ಬ್ಯಾನರ್ನಲ್ಲಿ ಬಂದ "ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ'ಗೆ ಒಳ್ಳೆ ಪ್ರತಿಕ್ರಿಯೆ ದೊರೆಯಿತು. ಆದರೆ, ಒಂದು ಹಂತದಲ್ಲಿ ಕೆಲ ಚಿತ್ರಗಳಿಂದ ಕೆಟ್ಟ ಅನುಭವಗಳಾದವು. "ಪೆದ್ರೋ'ದಂತಹ ಸಿನಿಮಾಗಳು ಆಚೆ ತರಲಾಗಲಿಲ್ಲ. ದುಡಿದು ತಂದು, ಇಲ್ಲಿ ಸಿನಿಮಾಗಳ ಮೇಲೆ ಹಣ ಹಾಕಿದರೆ, ಅದನ್ನು ಜನರಿಗೆ ತಲುಪಿಸಲೂ ಸಾಧ್ಯವಾಗುತ್ತಿರಲಿಲ್ಲ. ಆಗ ಕೆಲ ಚಿತ್ರಗಳಿಗೆ ಒಟಿಟಿಯಲ್ಲಿ ಅವಕಾಶ ದೊರೆತು, ಬಜೆಟ್ ರಿಕವರಿ ಆಯಿತು. ಹಾಗಂತ ಕನ್ನಡ ಸಿನಿಮಾ ಎಂಬ ಕಾರಣಕ್ಕೆ ಒಟಿಟಿವರು ಸಹ ಖರೀದಿಸುವುದಿಲ್ಲ. ಹೀಗಿರುವಾಗ ರಿಕವರಿ ಹೇಗೆ? ಹೀಗಾಗಿಯೇ "ಶಿವಮ್ಮ' ಚಿತ್ರಕ್ಕೆ ಮೆಚ್ಚುಗೆ ಬಂದರೂ, ಹಾಕಿದ್ದ ಹಣ ವಾಪಸ್ ಬರಲಿಲ್ಲ. ಹೀಗಾದಾಗ ಹೆಚ್ಚು ಸಿನಿಮಾಗಳನ್ನು ಮಾಡುವುದು ಕಷ್ಟ. ಬೇರೆ ಚಿತ್ರರಂಗಗಳಲ್ಲಿ ಸಿನಿಮಾ ಸಂಸತಿ ಇದೆ. ನಮ್ಮಲ್ಲಿ ಆ ಸಂಸತಿ ಬೆಳೆಸಿಲ್ಲ. ಬೇರೆ ಚಿತ್ರರಂಗಗಳಲ್ಲಿ ಜನಪ್ರಿಯ ಸ್ಟುಡಿಯೋಗಳಿವೆ. ಸಿನಿಮಾ, ಸಿರೀಸ್ ಅಂತ ಏನಾದರೂ ಆಗುತ್ತಿರುತ್ತವೆ. ಆದರೆ, ನಮ್ಮಲ್ಲಿ ಅಂತಹ ಸ್ಟುಡಿಯೋಗಳಿಲ್ಲ.