‘ಕಣ್ಣಪ್ಪ’ ಕುರಿತು ಟ್ರೋಲ್​ ಮಾಡುವವರು ಶಿವನಿಂದ ಶಿಕ್ಷೆ ಅನುಭವಿಸುವುದು ಸತ್ಯ; ನಟ ರಘುಬಾಬು ಹೀಗೇಳಿದ್ದೇಕೆ? | Kannappa

Untitled design (67)
Published on

ಹೈದರಾಬಾದ್​​: ಮಂಚು ವಿಷ್ಣು ಅವರ ಕನಸಿನ ಯೋಜನೆ ‘ಕಣ್ಣಪ್ಪ’(Kannappa) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದ ಮತ್ತು ಮೋಹನ್ ಬಾಬು ನಿರ್ಮಾಣದ ಈ ಸಿನಿಮಾ ಏಪ್ರಿಲ್ 25ರಂದು ತೆರೆಗೆ ಬರುತ್ತಿದೆ. ಈ ಚಿತ್ರದಿಂದ ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳು ಮತ್ತು ಹಾಡುಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ.

ಚಿತ್ರದ ಪಾತ್ರಗಳ ಹೆಸರುಗಳು ಸೇರಿದಂತೆ ಫಸ್ಟ್ ಲುಕ್ ಪೋಸ್ಟರ್‌ಗಳನ್ನು ತಯಾರಕರು ಬಹಿರಂಗಪಡಿಸಿದ್ದಾರೆ. ಇವುಗಳಿಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿತು. ಹಾಡುಗಳಿಗೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಅದೇ ಸಮಯದಲ್ಲಿ ಕೆಲವು ನೆಟಿಜನ್‌ಗಳು ಕಣ್ಣಪ್ಪ ಚಿತ್ರವನ್ನು ಟ್ರೋಲ್ ಮಾಡುತ್ತಿದ್ದಾರೆ. ಟ್ರೋಲ್​ಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ನಟ ರಘುಬಾಬು ಅವರು ನೀಡಿರುವ ಹೇಳಿಕೆಗಳು ಸದ್ಯ ಚರ್ಚೆಯ ವಿಷಯವಾಗಿದೆ.

ಟ್ರೋಲ್​ ಮಾಡುವವರ ಕುರಿತು ಕೇಳಿದ ಪ್ರಶ್ನೆಗೆ ವೇದಿಕೆಯಲ್ಲಿ ಕುಳಿತ್ತಿದ್ದ ರಘುಬಾಬು ಮೈಕ್ ತೆಗೆದುಕೊಂಡು ನನ್ನ ಮಾತನ್ನು ಕೇಳಿ ಎಂದು ಹೇಳಿದರು. ನಾನು ಈಗಲೇ ಹೇಳುತ್ತಿದ್ದೇನೆ, ಈ ಚಿತ್ರದ ಬಗ್ಗೆ ಯಾರಾದರೂ ಟ್ರೋಲ್ ಮಾಡಿದರೆ ಅವರು ಶಿವನಿಂದ ಶಾಪಗ್ರಸ್ತರಾಗುತ್ತಾರೆ. ನೆನಪಿಡಿ ನಾನು ಹೇಳಿದ್ದು ನೂರಕ್ಕೆ ನೂರು ನಿಜವಾಗುತ್ತದೆ. ಯಾರು ಟ್ರೋಲ್ ಮಾಡಿದರೂ ಅವರಿಗೆ ಶಿಕ್ಷೆ ತಪ್ಪಿದ್ದಲ್ಲ ಎಂದು ಗಂಭೀರವಾಗಿ ಎಚ್ಚರಿಸಿದರು.

ಕಣ್ಣಪ್ಪ ಸಿನಿಮಾದಲ್ಲಿ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್, ಕಾಜಲ್ ಅಗರ್ವಾಲ್, ಐಶ್ವರ್ಯಾ ರಾಜೇಶ್, ಶರತ್ ಕುಮಾರ್, ಬ್ರಹ್ಮಾನಂದಂ, ಮಧುಬಾಲಾ, ಮುಖೇಶ್ ರಿಷಿ, ಕರುಣಾಸ್, ಯೋಗಿ ಬಾಬು, ಸಪ್ತಗಿರಿ, ರಘು ಬಾಬು, ದೇವರಾಜ್, ಮಂಚು ಅವ್ರಾಮ್ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net