

ವಿಯೆಟ್ನಾಂ: ( Video Viral ) ಕನ್ನಡ ನಾಡಿನಲ್ಲಿ ಹುಟ್ಟಿ ಕನ್ನಡ ಭಾಷೆ ಗೊತ್ತಿದ್ದರೂ ಮಾತನಾಡಲು ಹಿಂಜರಿಯುವುವರಿಂದ ಭಾಷೆ ಉಳಿಯಲು ತೊಡಕಾಗುತ್ತಿದೆ. ಆದರೆ ಹೊರ ದೇಶವಾದ ವಿಯೆಟ್ನಂನಲ್ಲಿ ಬೀದಿ ಬದಿಯ ಮಹಿಳಾ ವ್ಯಾಪಾರಿಯೊಬ್ಬಳು ಕನ್ನಡ ಮಾತನಾಡುವ ಮೂಲಕ ಕನ್ನಡಿಗರ ಮನಸ್ಸು ಗೆದಿದ್ದಾಳೆ.
ಇತ್ತಿಚೇಗೆ ಕನ್ನಡಿಗರ ಗುಂಪೊಂದು ವಿಯೆಟ್ಮಂಗೆ ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ಮಹಿಳೆಯೊಬ್ಬಳು ಕನ್ನಡದಲ್ಲಿ ವ್ಯಾಪಾರ ಮಾಡುತ್ತಿರುವ ದೃಶ್ಯ ಕಂಡು ಅವರು ಅಚ್ಚರಿಗೊಂಡಿದ್ದಾರೆ. ಇದೀಗ ವಡಿಯೋ ವೈರಲ್ ಆಗುತ್ತಿದ್ದಂತೆ ನಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?: ಮಹಿಳೆಯೊಬ್ಬಳು 6 ಸೆಟ್ ಪರ್ಸ್ ಅನ್ನು ಮಾರುತ್ತಾ ಇವರತ್ತ ಬರುತ್ತಾಳೆ. ಅಲ್ಲದೇ ಪರ್ಸ್ ಖರಿದೀಸುವಂತೆ ಕೇಳಿಕೊಂಡಿದ್ದಾಳೆ. ಅವರು ಪರ್ಸ್ಸೆಟ್ ಬೆಲೆ ಎಷ್ಟು ಅಂತ ಕೇಳಿದಾಗ ಮಹಿಳೆ ಕನ್ನಡದಲ್ಲೇ ಉತ್ತರಿಸಿದ್ದಾಳೆ.
ಆ ಮಹಿಳೆಯ ಕನ್ನಡಾಭಿಮಾನ ಕಂಡು ಕನ್ನಡಿಗರ ಗುಂಪೊಂದು ಪರ್ಸ್ ಖರೀದಿಸಿದ್ದಾರೆ. ಆ ಮಹಿಳೆ ಕನ್ನಡದ ಮೇಲೆ ಇಟ್ಟಿರುವ ಅಭಿಮಾನಕ್ಕೆ ಕನ್ನಡ ಜನತೆ ಫುಲ್ ಫೀದಾ ಆಗಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.