ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣದಲ್ಲಿ ಮುಸ್ಲಿಮರ ಕಡೆಗಣನೆ ಆರೋಪ ಸುಳ್ಳು: ಡಾ.ಮಹೇಶ ಜೋಶಿ

mahesh joshi
Published on

ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣದಲ್ಲಿ ಮುಸ್ಲಿಮರ ಕಡೆಗಣನೆ ಆರೋಪ‌ ಸುಳ್ಳು. ಆಮಂತ್ರಣ ಪತ್ರದಲ್ಲಿ 11 ಮುಸ್ಲಿಂ ಸಮುದಾಯದವರ ಹೆಸರಿದೆ ಎಂದು ಕಸಾಪ‌ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಡಾ.ಮಹೇಶ ಜೋಶಿ, ಇದು ಜಾತಿ ಆಧಾರಿತ ಸಮ್ಮೇಳನ ಅಲ್ಲ. ಕನ್ನಡವೇ ಇಲ್ಲಿ ಮುಖ್ಯ. ಕನ್ನಡದ ಸಾಧಕರು ಯಾವುದೇ ಧರ್ಮದವರಾದರೂ ಇಲ್ಲಿ ಮುಖ್ಯವಲ್ಲ ಎಂದರು.

ಪುರುಷೋತ್ಥಮ ಬಿಳಿಮಲೆ ಅವರು ಅವರ ಪರಿಚಯದವರಿಗೆ ಸಮ್ಮೇಳನದಲ್ಲಿ ಪೆಂಡಾಲ್ ಹಾಕಿಸಲು ಅವಕಾಶ ಕೊಡಿಸಿ ಎಂದು ಕೇಳಿದ್ದರು. ಆ ವಿಷಯ ಜಿಲ್ಲಾಡಳಿತಕ್ಕೆ ಬಿಟ್ಟದ್ದು ಎಂದಿದ್ದೆ. ಇದೇ ವಿಚಾರಕ್ಕಾಗಿ ಬೇಸರಗೊಂಡು ಪರ್ಯಾಯ ಸಮ್ಮೇಳನದ ಕುರಿತು ಅವರು ದುರುದ್ದೇಶದಿಂದ ಮಾತನಾಡುತ್ತಿದ್ದಾರೆ. ಇದು ಸಮಸ್ತ ಕನ್ನಡಿಗರಿಗೆ ಅವರು ಮಾಡಿದ ಅವಮಾನ ಎಂದು ಜೋಶಿ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net