ಕಸಾಪದಿಂದ ಕನ್ನಡ ಪಸರಿಸುವ ಕಾರ್ಯ

11 nrp 4 ganesh
ಎನ್.ಆರ್.ಪುರದ ನೇತಾಜಿ ನಗರದ ಗಣೇಶೋತ್ಸವದಲ್ಲಿ ಗಾಯಕ ಹಿರೇನಲ್ಲೂರು ಶ್ರೀನಿವಾಸ್ ಅವರನ್ನು ಗೌರವಿಸಲಾಯಿತು. ಎಚ್.ಎಸ್.ಪೂರ್ಣೇಶ್, ನಂಜುಂಡಪ್ಪ, ಮಂಜಪ್ಪ, ನಾಗರಾಜ್ ಇದ್ದರು.
Published on

ಎನ್.ಆರ್.ಪುರ: ಕನ್ನಡ ಸಾಹಿತ್ಯ ಪರಿಷತ್ ಹಳ್ಳಿಗಳಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿದೆ ಎಂದು ಕಸಾಪ ಹಿರಿಯ ಸದಸ್ಯ ಎಂ.ಪಿ.ಚಕ್ರಪಾಣಿ ಹೇಳಿದರು.
ಮಂಗಳವಾರ ಪಟ್ಟಣದ ನೇತಾಜಿ ನಗರದಲ್ಲಿ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಕಸಾಪ ಏರ್ಪಡಿಸಿದ್ದ ಕನ್ನಡ ರಸಪ್ರಶ್ನೆ ಹಾಗೂ ಅಂತ್ಯಾಕ್ಷರಿ ಕಾರ್ಯಕ್ರಮದಲ್ಲಿ ಮಾತನಾಡಿ, ಕಸಾಪ ಒಳ್ಳೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪೂರ್ಣೇಶ್ ಮಾತನಾಡಿ, ಕನ್ನಡ ಜಾಗೃತಿ ಬೆಳೆಸುವುದು, ಸಾಹಿತ್ಯ ಬೆಳೆಸುವುದು ಪರಿಷತ್‌ನ ಆದ್ಯ ಕರ್ತವ್ಯ ಎಂದು ಹೇಳಿದರು.
ಕನ್ನಡ ಚಲನಚಿತ್ರ ಅಂತ್ಯಾಕ್ಷರಿ ಸ್ಪರ್ಧೆಯನ್ನು ಕಡೂರು ತಾಲೂಕಿನ ಕಲಾವಿದ ಹಿರೇನಲ್ಲೂರು ಶ್ರೀನಿವಾಸ್ ನಡೆಸಿಕೊಟ್ಟರು. ವಿವಿಧ ಚಲನಚಿತ್ರ ಗೀತೆಗಳನ್ನು ಹಾಡಿ ಮನರಂಜಿಸಿದರು. ಕಲಾವಿದ ಹಿರೇನಲ್ಲೂರು ಶ್ರೀನಿವಾಸ್ ಹಾಗೂ ಪತ್ರಕರ್ತ ಪುರುಷೋತ್ತಮ್ ಅವರನ್ನು ಗೌರವಿಸಲಾಯಿತು.
ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಾ ನಂಜುಂಡಸ್ವಾಮಿ, ಬಿ.ನಂಜುಂಡಪ್ಪ, ಮಂಜಪ್ಪ, ಚರಣ್‌ರಾಜ್, ಪರಮೇಶ್ವರ್, ನಾಗರಾಜ್ ಅಪ್ಪಾಜಿ, ಜುಬೇದಾ, ದೇವರಾಜ್, ಸುಜಾತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net