

ಹಾವೇರಿ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಯಾತ್ರೆ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಶಾಸಕ ರುದ್ರಪ್ಪ ಲಮಾಣಿ ತಾಯಿ ಭುವನೇಶ್ವರಿ ಮೂತಿರ್ಗೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿದರು.
ನಗರದ ಕೆಪಿಟಿಸಿಎಲ್ ಕಚೇರಿ ಎದುರು ಸೇರಿದ ಕನ್ನಡಾಭಿಮಾನಿಗಳು ಕನ್ನಡ ಜ್ಯೋತಿ ರಥಯಾತ್ರೆ ಆಗಮಿಸುತ್ತಿದ್ದಂತೆ ಜೈಕಾರ್ ಕೂಗಿದರು. ಸ್ವಾತಂತ್ರ$್ಯ ಹೋರಾಟಗಾರ ಸಂಗೂರ ಕರಿಯಪ್ಪ ಪುತ್ಥಳಿಯಿಂದ ಆರಂಭವಾದ ಮೆರವಣಿಗೆ ಕಿತ್ತೂರು ಚೆನ್ನಮ್ಮ ವೃತ್ತದವರೆಗೆ ಸಾಗಿ ಬಂದಿತು. ಡೊಳ್ಳಿನ ಮೇಳದ ಕಲಾವಿದರು, ಕನ್ನಡ ಶಲ್ಯ ಧರಿಸಿದ್ದ ಕನ್ನಡಾಭಿಮಾನಿಗಳು ಮತ್ತು ಕನ್ನಡ ಬಾವುಟ ಹಿಡಿದುಕೊಂಡಿದ್ದ ವಿದ್ಯಾಥಿರ್ಗಳು, ಎನ್ಸಿಸಿ ಶಿಬಿರಾಥಿರ್ಗಳು ಮೆರವಣಿಗೆಯುದ್ದಕ್ಕೂ ಸಾಗಿ ಬಂದರು.
ಸಾಹಿತಿ ಸತೀಶ ಕುಲಕಣಿರ್, ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ, ತಹಸೀಲ್ದಾರ್ ಶರಣಮ್ಮ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಣ್ಣ ಸಾತೇನಹಳ್ಳಿ, ಸದಸ್ಯ ಸಂಜೀವಕುಮಾರ ನೀರಲಗಿ, ಆಯುಕ್ತ ಪರಶುರಾಮ ಛಲವಾದಿ, ಮುಖಂಡರಾದ ಕೊಟ್ರೇಶಪ್ಪ ಬಸೇಗಣ್ಣಿ, ಎಂ.ಎಂ. ಮೈದೂರ, ಮಾದೇಗೌಡ ಗಾಜಿಗೌಡ್ರ, ಎಂ.ಎಸ್.ಕೋರಿಶೆಟ್ಟರ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕು ಘಟಕದ ಅಧ್ಯಕ್ಷ ವೈ.ಬಿ. ಆಲದಕಟ್ಟಿ, ಡಾ. ಗೀತಾ ಸುತ್ತಕೋಟಿ, ಆರ್.ವಿ. ಚಿನ್ನಿಕಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.