

ಮಂಡ್ಯ: ದೇಶದಲ್ಲಿ ವಚನ ಸಾಹಿತ್ಯ ಉಳಿದಿದೆ ಎಂದರೆ ಮಡಿವಾಳ ಮಾಚಿದೇವರು ಕಾರಣ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ.ಎಚ್.ರವಿಕುಮಾರ್ ಅಭಿಪ್ರಾಯಪಟ್ಟರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಮಾಚಿದೇವ ಸರ್ಕಾರಿ, ಅರೆ ಸರ್ಕಾರಿ ಮತ್ತು ನಿವೃತ್ತ ನೌಕರರ ಪತ್ತಿನ ಸಹಕಾರ ಸಂದ ವತಿಯಿಂದ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 12ನೇ ಶತಮಾನದಲ್ಲಿ ವಚನ ಸಾಹಿತ್ಯ ಹಾಗೂ ಮನುಕುಲ ರಕ್ಷಿಸಿದವರು ಮಡಿವಾಳ ಮಾಚಿದೇವರು. ಮುಂದಿನ ದಿನಗಳಲ್ಲಿ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಸಂಘಗಳನ್ನು ಕಟ್ಟುವುದು ಒಳ್ಳೆಯ ಬೆಳವಣಿಗೆ. ಬದ್ಧತೆ ಇಲ್ಲದೆ ಹೋದರೆ ಯಾವುದೇ ಸಂಗಳು ಅಭಿವೃದ್ಧಿಯಾಗುವುದು ಕಷ್ಟ. ಆದ್ದರಿಂದ ಸಂಗಮಗಳಲ್ಲಿ ನಂಬಿಕೆ, ಪ್ರಾಮಾಣಿಕತೆ ಇದ್ದರೆ ಜನರು ಮುಂದೆ ಬರುತ್ತಾರೆ. ಬಸವಕಲ್ಯಾಣದಲ್ಲಿ ಆದಂತಹ ಕ್ರಾಂತಿಗೆ ಮಡಿವಾಳ ಮಾಚಿ ದೇವರು ಕಾರಣ. ಮಡಿವಾಳ ಮಾಚಿದೇವರ 546 ವಚನಗಳು ಸಿಕ್ಕಿವೆ. ಅವರ ವಚನಗಳ ಬಗ್ಗೆ ಇನ್ನೂ ಸಂಶೋಧನೆ ಆಗುತ್ತಿವೆ ಎಂದರು.
ಮಡಿವಾಳ ಸಮಾಜದವರು ಸಂಘಟಿತರಾಗುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಬೇಕು. ಮಡಿವಾಳ ಮಾಚಿದೇವರ ಬಗ್ಗೆ ಜನಾಂಗದಲ್ಲೇ ಅರಿವು ಇಲ್ಲದೆ ಇರುವುದು ವಿಪರ್ಯಾಸದ ಸಂಗತಿ. ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳು ಆಗಬೇಕು. ಜನಾಂಗದವರು ಹಕ್ಕುಗಳನ್ನು ಕೇಳುವುದಕ್ಕೆ ಹಿಂಜರಿಕೆ ಬೇಡ, ಸಂವಿಧಾನದಲ್ಲಿ ಹಕ್ಕಿನ ಜತೆ ಕರ್ತವ್ಯ ಪಾಲಿಸುವುದು ಇದೆ. ಈ ನಿಟ್ಟಿನಲ್ಲಿ ಹಕ್ಕನ್ನು ಪಡೆಯಲು ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಸಲಹೆ ನೀಡಿದರು.
ಸಂದ ಅಧ್ಯಕ್ಷ ಉಮೇಶ್, ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ನಿರ್ದೇಶಕ ಯು.ಸಿ.ಶಿವಕುವಾರ್, ರಾಜ್ಯ ಒಕ್ಕಲಿಗರ ಸಂದ ನಿರ್ದೇಶಕ ಅಶೋಕ್ ಜಯರಾಮ್, ನಗರಸಭಾ ಸದಸ್ಯರಾದ ನಾಗೇಶ್, ಮಂಜುಳಾ ಇತರರಿದ್ದರು.
ಇದೇ ವೇಳೆ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.