

ರಾಣೆಬೆನ್ನೂರ: ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸತಿಯ ಬಗ್ಗೆ ವಿದ್ಯಾಥಿರ್ಗಳು ಪ್ರೀತಿ, ಅಭಿಮಾನ, ಗೌರವದ ಮನೋಭಾವ ಬೆಳೆಸಿಕೊಂಡು ಸದಾ ಕನ್ನಡತನ ಮೆರೆಸಬೇಕು ಎಂದು ಉಪನ್ಯಾಸಕಿ ಇಂದಿರಾ ಕೊಪ್ಪದ ಹೇಳಿದರು.
ನಗರದ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ನಮ್ಮ ಹೃದಯದ ಭಾಷೆ, ಅದರ ಮೂಲಕ ನಾವು ನಮ್ಮ ಭಾವನೆಗಳನ್ನು ಸಮರ್ಥಕವಾಗಿ ಅಭಿವ್ಯಕ್ತಿಸಬಹುದು. ಕನ್ನಡ ಭಾಷೆ ಮತ್ತು ಸಾಹಿತ್ಯ ಪರಂಪರೆ ದೊಡ್ಡದು. ಅದರ ಬಗ್ಗೆ ವಿದ್ಯಾಥಿರ್ಗಳು ಅರಿವು ಮೂಡಿಸಿಕೊಳ್ಳಬೇಕು. ಅದಕ್ಕಾಗಿ ಕನ್ನಡ ಕೃತಿಗಳನ್ನು ಮತ್ತು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಡಾ. ಎಸ್.ಜಿ. ಮಾಕನೂರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಸಂಯೋಜಕಿ ಡಾ. ಸವಿತಾ ಚನ್ನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಮುಖರಾದ ರಾಜು ಜಿಂಗಾಡೆ, ಸುಷ್ಮಾ ಎಕ್ಕೆಗೊಂದಿ, ಗುರುರಾಜ ರೂಗಿ, ಎಸ್.ಜಿ. ಶಷಾಂಕ ಹಾಗೂ ಸಿಬ್ಬಂದಿ ಇದ್ದರು.